fbpx

(‌PUB G) Player Unknown’s Battlegrounds

ಬರಹಗಾರ: ಅಂಜೇರಿರ ವಿಶು ರಾಘವಯ್ಯ‌,

ಪಬ್ ಜಿ, ಇದೊಂದು ಇಂಟರ್ನೆಟ್ ಬಳಸಿ ಆಟ ಆಡುವ ಆಟವಾಗಿದೆ ಅನ್ಲೈನ್‌ ನಲ್ಲಿ ಹತ್ತಾರು ಜನರು ಕೂಡಿ ಮೊಬೈಲ್ ನಲ್ಲಿ ಆಡುವ ಆಟ, ಇದನ್ಜು‌ ಡೆವಲೆಪ್ ಮತ್ತು ಪಬ್ಲಿಶ್ ಮಾಡಿದ್ದು ಪಬ್ ಜಿ ಕೋ ಆಪರೇಷನ್ multiplayer battle royale game, ಇದೊಂದು ಧಕ್ಣಿಣ ಕೊರಿಯಾದ ಬ್ಲೂ ಹೋಲ್ ಎಂಬ ಕಂಪನಿ ತಯಾರಿಸಿದಾಗಿದೆ, ಹೂಡಿಕೆದಾರನಾಗಿ ಕಿಮ್ ಚಾಂಗ್ ಹಾನ್ ಮತ್ತು‌ ಗೇಮ್ ಡಿಸೈನ್ನು ಮಾಡಿದವರು ಬ್ರೆಂಡನ್ ಗ್ರೀನಿ.

ನಿಮಿಗೆಲ್ಲ ಗೊತ್ತಿರುವಹಾಗೆ ಈ ಆಟ ಇಡಿ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಈಗಿನ ಮಕ್ಕಳು 24×7 ಈ ಆಟದಲ್ಲಿ ಮಗ್ನವಾಗಿರುವುದು ಕೊಂಚ ಮಕ್ಕಳ ತಂದೆ ತಾಯಿಯರಲ್ಲಿ ಬೇಸರ ಮೂಡಿಸಿದೆ, ಯಾಕೆಂದರೆ ಮಕ್ಕಳು ಹೊರಾಂಗಣದಲ್ಲಿ ಆಡುವ ಬದುಲು‌ ಮೊಬೈಲ್ ಮತ್ತು ಟಾಬ್ ಗಳನ್ನು ಬಳಸಿ ಆಟವಾಡುತ್ತಿರುವುದು ಪೋಷಕರನ್ನು ಕೆಣಕುವಂತಾಗಿದೆ, ಅದಲ್ಲದೇ ೮-೪೦ ವರ್ಷದವರು ಈ ಆಟಕ್ಕೆ ಮಗ್ನರಾಗಿರುವುದು ಎಲ್ಲಾರಲ್ಲಿ ಅಚ್ಚರಿ ಮೂಡಿಸಿದೆ.

ಒಂದು ಕಡೆ ಪೋಷಕರು ಪಬ್ ಜಿ ಬಂದ ಮೇಲೆ ಮಕ್ಕಳು ದಾರಿತಪ್ಪುತ್ತಿರುವುದು ಕಣ್ಣ‌ ಮುಂದೆ ಕಂಡರೂ ಏನೂ ಮಾಡಲಾರದ ಪರಿಸ್ಥಿತಿ ಮತ್ತು ಮದುವೆಯಾದ ಹುಡುಗರು ಸಹ ಇದೆ ಗೋಳು ಎಂದು ಹೆಂಡತಿಯರ ದೂರು. ಹೀಗಿರುವಾಗ ಇದೇ ಕರ್ನಾಟಕದ ಮೂಲೆಮೂಲೆಗಳಲ್ಲಿ ಈ ಆಟವನ್ನು ಆಡುವ ಜನರು ಲಕ್ಷಗಟ್ಟಲೆ ಆಗಿದ್ದಾರೆ ಹೀಗೆಯೇ ಬೆಂಗಳೂರಿನ ನಿಮ್ಯಾಸ್ಸ್ ಆಸ್ಪತ್ರೆಗೆ ದಾಖಲಾಗಿರುವವರು ಸಹ ಇದ್ದಾರೆ, ತಮ್ನ ಮಕ್ಕಳನ್ನು ಮತ್ತು ತಮ್ಮ ಗಂಡಂದಿರನ್ನು ಈ ಆಟದಿಂದ ಮುಕ್ತಗೊಳಿಸಿ ಉಳಿಸಿಕೊಳ್ಳಲು ಪ್ರಯತ್ನಿಸಿದರು ಏನು ಪ್ರಯೋಜನ ಇಲ್ಲ ಎಂದು ಅಳಲು ತೋರಿದ್ದಾರೆ.

ಏನೇ ಆಗಲಿ ಟೈಂ ಪಾಸ್ಗೆ ಆಡಿದರೆ ತೊಂದರೆಗಳು ಬರುವುದಲ್ಲಿ ಅದಕ್ಕೆ 24×7 ಆಡಿಕೊಂಡಿದ್ದರೆ ಕಣ್ಣಿಗೂ ತೊಂದರೆ, ಮನೆಯವರಿಗೂ ಸಹ ತೊಂದರೆ, ತಮ್ಮ ಆರೋಗ್ಯ, ತಮ್ಮ ಕುಟುಂಬವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸೋಣ.

ಅಂಜೇರಿರ ವಿಶು ರಾಘವಯ್ಯ‌,

ಆರೋಗ್ಯ ಇಲಾಖೆ ಕುಶಾಲನಗರ ಕೊಡಗು.

error: Content is protected !!