ಹೋಂ ಸ್ಟೇ ಕಳ್ಳತನ: ಮಾಲು ಸಮೇತ ಮೂವರು ವಶಕ್ಕೆ

ಇತ್ತೀಚೆಗೆ ದಕ್ಷಿಣ ಕೊಡಗಿನ ಶ್ರೀಮಂಗಲ ಪೊಲೀಸ್ ಠಾಣೆಯ ವ್ಯಾಪ್ತಿಯ ಬೀರುವ ಗ್ರಾಮದ ಆತ್ಮಾಹಿತ ಹೆಸರಿನ ಹೋಂಸ್ಟೇ ನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮೂವರನ್ನು ಬಂಧಿಸಿ ಕಳುವಾಗಿದ್ದ ಮಾಲನ್ನು ವಶಕ್ಕೆ ಪಡೆಯಲಾಗಿದೆ.

ಎಸ್ಪಿ ಅಯ್ಯಪ್ಪ ರವರ ಮಾರ್ಗದರ್ಶನದಂತೆ ಕುಟ್ಟ ಸರ್ಕಲ್ ಮತ್ತು ಶ್ರೀಮಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ, ನಾಯ್ಕಲ್ ಗ್ರಾಮದ ಮಂಜು, ಸಂಜು, ಸುಧೀರ್ ಹೆಸರಿನ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

error: Content is protected !!