ಹೊಸ ವರ್ಷ – ಪಾರ್ಟಿ ಬೇಡ. ಪಟಾಕಿ ಸಿಡಿಸ ಬೇಡಿ. – ಪೊಲೀಸ್ ಎಚ್ಚರಿಕೆ.

ಕೊಡಗು: ಪೊಲೀಸ್ ಇಲಾಖೆ ವತಿಯಿಂದ ನ್ಯೂ ಇಯರ್ ಮಾರ್ಗಸೂಚಿ ಸಭೆ ನಡೆದಿದ್ದು
ಹೊಂಸ್ಟೇ,ರೆಸಾಟ್೯,ಲಾಡ್ಜ್ ಮಾಲೀಕರ ಸಭೆಯಲ್ಲಿ ಭಾಗಿಯಾಗಿದ್ದರು.
ಕೋವಿಡ್ ನಿಯಮ ಉಲ್ಲಂಘಿಸದಿರಿ ಮತ್ತು
ಸರಕಾರ,ಪೊಲೀಸ್,ಜಿಲ್ಲಾಡಳಿತ ಮಾರ್ಗಸೂಚಿ ಪಾಲಿಸಿ
ಆಡಂಭರದ ಆಚರಣೆ ಬೇಡ
ಸಾಮಾಜಿಕ ಅಂತರ ಕಾಪಾಡಿಕೊಳ್ಲಿ
ಸಿಡಿ ಮದ್ದು ಪ್ರದರ್ಶನ ಬೇಡ ಎಂದು
ಡಿವ್ಯೆಎಸ್ಪಿ ದಿನೇಶ್ ಕುಮಾರ್ ಮನವಿ ಮಾಡಿದ್ದಾರೆ
ಹೋಂ ಸ್ಟೇ.ರೆಸಾರ್ಟ್. ಲಾಡ್ಜ್ ಗಳಿಗೆ ಬರುವ ಪ್ರವಾಸಿಗರಿಗೆ ಹೆಚ್ಚು ಜನ ಸೇರುವ ರಾಜಾ ಸೀಟ್ ಅಬ್ಬಿ ಜಲಪಾತ ಮತ್ತು ಇತರ ಪ್ರವಾಸಿ ತಾಣಗಳಿಗೆ ಹೋಗದಂತೆ ಸೂಚನೆ ನೀಡಲು ದಿನೇಶ್ ಮನವಿ.ಹೊಸ ತಳಿಯ ರೂಪಾಂತರಿ Covid ಕೊಡಗಿನಲ್ಲಿ ವ್ಯಾಪಿಸದಂತೆ ತಡೆಯಲು ಎಲ್ಲರ ಸಹಕಾರ ಕೋರಿದ ಪೊಲೀಸ್ ಅಧಿಕಾರಿ, ಡಿ.ಜೇ ಸೇರಿದಂತೆ ಅಬ್ಬರದ ಮ್ಯೂಸಿಕ್ ಗೆ ಅವಕಾಶ ಇಲ್ಲ. ಸಾರ್ವಜನಿಕವಾಗಿ ಹೊಸ ವರ್ಷ ಆಚರಣೆಗೆ ಅನುಮತಿ ಇಲ್ಲ ಎಂದು ದಿನೇಶ್ ಕುಮಾರ್ ಸೂಚನೆ ನೀಡಿದ್ದಾರೆ.