ಹೊಸ ವರ್ಷಕ್ಕೆ ನಿಷೇಧಾಜ್ಞೆಯಿಂದ ಬ್ರೇಕ್!

ಮಂಗಳೂರು: ಹೊಸವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಇಂದು ಸಂಜೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ 5ಕ್ಕಿಂತ ಹೆಚ್ಚು ಜನ ಸೇರುವುದಕ್ಕೆ ನಿರ್ಬಂಧ ಹೇರಿಕೆ ಸೇರಿ ಸಾರ್ವಜನಿಕ ಸ್ಥಳ, ರಸ್ತೆ, ಬೀಚ್ ಮತ್ತು ಮೈದಾನಗಳಲ್ಲಿ ಹೊಸ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ವಸತಿ ಸಮುಚ್ಚಯ, ಖಾಸಗಿ ಕ್ಲಬ್ ಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ. ಅಲ್ಲದೇ, ಹೋಟೆಲ್, ಬಾರ್, ಪಬ್, ಮಾಲ್ ಗಳಲ್ಲಿ ಡಿಜೆ, ಮ್ಯೂಸಿಕಲ್ ನೈಟ್ ಗೂ ನಿರ್ಬಂಧವಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮೀರಿದರೇ ಕಾನೂನು ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.