ಹೊರಗಿನವರಿಗೆ ಮುಕ್ತ ಪ್ರವೇಶ, ಒಳಗಿನವರಿಗೆ ಬಿಗಿ ಕ್ರಮ

ಕೊಡಗಿನ ಗಡಿಯಲ್ಲಿ ಲಾಕ್ಡೌನ್ ನಿಯಮಗಳನ್ನು ಕ್ಯಾರೇ ಅನ್ನದೆ ಪ್ರವಾಸಿಗರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಪಕ್ಕದ ಮೈಸೂರಿನಲ್ಲಿ ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ
ಜಿಲ್ಲೆಯತ್ತ ಹೊರಗಿನವರ ಪ್ರವೇಶ ಹೆಚ್ಚಾಗಿದೆ.

ಇದಕ್ಕೆ ಸಾಕ್ಷಿ ಎನ್ನುವಂತೆ ಕೊಪ್ಪ ಗೇಟಿನಲ್ಲಿ ನಿಂತಿರುವ ವಾಹನಗಳು.ಇನ್ನು ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆಯಾಗದಿರುವ ಹಿನ್ನಲೆಯಲಿ ಹೊಟೇಲ್,ರೆಸಾರ್ಟ್ ಗಳು ಲಭ್ಯವಿರದ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದ ಹೋಂಸ್ಟೇ ಗಳಿಗೆ ಲಗ್ಗೆ ಇಡುವ ಸಾಧ್ಯತೆಯಿದ್ದು,ಜಿಲ್ಲಾಡಳಿತ ಕಟ್ಟುನಿಟ್ಟಿನ ಕೋವಿಡ್ ಮಾರ್ಗಸೂಚಿ ನೀಡದದಿದ್ದಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗುವುದಂತೂ ಖಂಡಿತ.