ಹೊನ್ನಮ್ಮನ ಕೆರೆಯಲ್ಲಿ ಬಾಗೀನ ಅರ್ಪಿಸಿ ಸ್ವರ್ಣ ಗೌರಿ ವೃತಾಚಾರಣೆ

ಗೌರಿ ಗಣೇಶ ಪ್ರಯುಕ್ತ ಕೊಡಗು ಜಿಲ್ಲೆಯಾಧ್ಯಂತ ಗೌರಿಯನ್ನು ಪ್ರತಿಷ್ಟಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು.
ಇದರಲ್ಲಿ ವಿಶೇಷತೆ ಪಡೆಯುವುದೆಂದರೆ ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮದ ಸ್ವರ್ಣಗೌರಿ ಬಾಗೀನ ಅರ್ಪಿಸಲಾಯಿತು.
ಪಠ್ಯ ಪುಸ್ತಕಗಳಲ್ಲಿ ಕೆರೆಗೆ ಹಾರ ಹೆಸರಿನಲ್ಲಿ ಕೇಳಿದ್ದ ಈ ಸ್ಥಳಕ್ಕೆ ಹೊನ್ನಮ್ಮನ ಕೆರೆ ಎಂದು ಕರೆಯಲ್ಪಡುತ್ತದೆ, ಊರಿಗೆ ಬರ ಬಂದ ಸಂದರ್ಭ ಹೂನ್ನಮ್ಮ ಎಂಬಾಕೆ ಕೆರೆ ಏರಿ ಮೇಲೆ ನಿಂತು, ಕೆರೆಗೆ ಹಾರಿದ ಸಂದರ್ಭ ನೀರು ಕಾಣಿಸಿಕೊಂಡಿದ್ದು, ಇಂದಿಗೂ ಬತ್ತಲಿಲ್ಲ ಎನ್ನುವ ಜಾನಪದ ಐತಿಹ್ಯವಿದೆ.

ಇಂದಿಗೂ ಇಲ್ಲಿ ನೂತನ ವಧು-ವರರು ಇಲ್ಲಿಗೆ ಮುತೈದೆಗೆ ನೀಡಲಾಗುವ ಎಲ್ಲಾ ವಸ್ತುಗಳನ್ನು ಇಟ್ಟು ಕೆರೆಗೆ ಬಾಗೀನ ಅರ್ಪಿಸಿದರೆ, ಸಂತಾನ ಭಾಗ್ಯ ಮತ್ತು ದಾಂಪತ್ಯ ಜೀವನ ಸುಖವಾಗಿರುತ್ತದೆ ಎನ್ನುವ ಕಾರಣಕ್ಕೆ, ಕೊಟ್ಟ ಮಗಳು, ಇಲ್ಲವೇ ಗಂಡನ ಮನೆಗೆ ಬರುವ ಹೆಣ್ಣು ಮಕ್ಕಳು ಇಲ್ಲಿ ಬಾಗೀನ ಅರ್ಪಿಸಿ ಭಕ್ತಿ ಮೆರೆಯುತ್ತಾರೆ.

error: Content is protected !!