fbpx

ಹೈಟೆಕ್ ಬೇಟೆಗಾರರು..!

ವಿಶೇಷ ವರದಿ: ಗಿರಿಧರ್ ಕೊಂಪುಳೀರ

ಕೊಡಗು: ಬಾಲಿವುಡ್ ನಟರೊಬ್ಬರು ಮೋಜು ಮಸ್ತಿಗಾಗಿ ಸ್ನೇಹಿತರನ್ನೇಲ್ಲಾ ಒಗ್ಗೂಡಿಸಿ ಚಿರತೆ ತನ್ನ ಬೇಟೆ ಮಾಡುವ ರೀತಿಯಲ್ಲಿ ಕೃಷ್ಣ ಮೃಗ ಭೇಟೆಯಾಡಿರುವ ವಿಚಾರ,ಈ ಪ್ರಕರಣ ವನ್ಯ ಜೀವಿ ಕಾಯ್ದೆಯಡಿಯಲ್ಲಿ ನ್ಯಾಯಾಲಯದಲ್ಲಿ ವಿಚಾರ ಎಲ್ಲವೂ ಗೊತ್ತಿರುವಂತಹದೇ.ಇಂತಹಾ ಕಲಾವಿದನ ರೀತಿಯಲ್ಲಿ ಹೈಟೆಕ್ ಬಂದೂಕು ,ಫೋರ್ ವೀಲ್ ಡ್ರೈವ್ ಜೀಪು,ಇಂಪೋರ್ಟೆಡ್ ಬಂದೂಕು ಬಿಲ್ಲು ಬಾಣ,ಫೋಕಸ್ ಲೈಟು ,ಸ್ಪೋರ್ಟ್ ಆರ್ಚರಿ ಬಿಲ್ಲುಗಳು ಒಂದಾ ಎರಡಾ!! ಇವುಗಳನೆಲ್ಲಾ ಇಟ್ಟುಕೊಂಡು ಭೇಟೆಗೆ ಹೋಗಿದ್ದಾರೆ ಪ್ರಭಾವಿ ವ್ಯಕ್ತಿಗಳು ಕಡೆಗೂ ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಸಿಕ್ಕಿಯೂ ಬಿದ್ದಿದ್ದಾರೆ.
ಅಂದಹಾಗೆ ಇದು ನಡೆದದ್ದು ಬೇರೆಲ್ಲೂ ಅಲ್ಲ ನಮ್ಮ ರಾಜ್ಯದಲ್ಲೆ , ಹೌದು ನಡೆದಿರುವುದು ಚಿತ್ರದುರ್ಗ ಜಿಲ್ಲೆ
ಲ್ಲೆಯಲ್ಲಿ. ಮಲೆನಾಡಿನ ಭಾಗದಲ್ಲಿ ಕಾಡು ಮಾಂಸಕ್ಕಾಗಿ ಆಗಿಂದಾಗೆ ಸದ್ದಿಲ್ಲದೆ ಕಳ್ಳಬೇಟೆ ನಡೆಯುತ್ತಲೇ ಇರುತ್ತದೆ ಆದರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಅರಣ್ಯ ಪ್ರದೇಶದಲ್ಲಿ ಅತ್ಯಾಧುನಿಕ ದುಬಾರಿ ಆಯುಧಗಳೊಂದಿಗೆ ಬೇಟೆಗೆ ತೆರಳಿದ್ದ ಶ್ರೀಮಂತ ಕುಟುಂಬದ ತಂಡವನ್ನು ನೋಡಿ ಅರಣ್ಯ ಇಲಾಖೆಯವರೇ ಬೆಚ್ಚಿಬಿದ್ದಿದ್ದಾರೆ. 50 -60 ರ ದಶಕದಲ್ಲಿ ಬ್ರಿಟೀಷರಿಂದ ಬಳುವಳಿಯಾಗಿ ಪಡೆದುಕೊಂಡು ಬಂದಿರುವ ಬೇಟೆ ಕ್ರೀಡೆಯನ್ನೇ ಮುಂದುವರೆಸಿಕೊಂಡು ಬಂದಿರುವ ಇಂದಿನ ಯುವ ಪೀಳಿಗೆಗೆ 1980ರ ಅರಣ್ಯ ಕಾಯ್ದೆ ಮತ್ತು ವನ್ಯಜೀವಿ ಕಾಯ್ದೆಯನ್ನು ಗಾಳಿಗೆ ತೂರಿ ಬೇಟೆಗೆ ಯತ್ನಿಸಿದ್ದಾರೆ,ಮೂರು ವಾಹನ,ಆಯುಧ,ವನ್ಯ ಜೀವಿಗಳ ಕೆಲವೊಂದು ಗರಿ,ಕೊಂಬು, ಮುಂತಾದವು ಸೇರಿದಂತೆ 7 ಮಂದಿ ವಶದಲ್ಲಿದ್ದಾರೆ.ದುರಂತ ಎಂದರೆ ಕಾರ್ಯಾಚರಣೆಯನ್ನು ಸಿಬ್ಬಂಧಿಗಳು ನಡೆಸಿದರು,ಪ್ರಭಾವಿಗಳಿಂದ ಅಧಿಕಾರಿಗಳಿಗೆ ಒತ್ತಡ ಬರುತ್ತಿದೆ…ಮುಂದೇನಾಗುತ್ತೋ ಕಾದುನೋಡಬೇಕಷ್ಟೆ.

error: Content is protected !!