ಹೇರೂರಿನಲ್ಲಿ ನಿರಂತರ ಕಾಡಾನೆ ಹಾವಳಿ:ಆರ್ ಆರ್ ಟಿಯಿಂದ ಕಾರ್ಯಚರಣೆ

ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಬೀಡು ಬಿಟ್ಟಿರುವ ಒಂಟಿ ಸಲಗದ ಜೊತೆ ಇದೀಗ ಅದರ ಕುಟುಂಬ ಸೇರಿಕೊಂಡು ಆತಂಕ ಮೂಡಿಸಿದೆ.

ಶಾಲೆಯ ಆವರಣ, ಕಾಫಿ ತೋಟ, ಮನೆಯ ಅಂಗಳ ಸೇರಿದಂತೆ ಜಮೀನಿನುಗಳಲ್ಲಿ ಅಡ್ಡಾಡಿ ಫಸಲು ನಾಶ ಮಾಡುತ್ತಿದ್ದು ಹೇರೂರು ಗ್ರಾಮಸ್ಥರು ಆತಂಕದಲ್ಲಿ ದಿನ ದೂಡುವಂತಾಗಿದೆ, ಅರಣ್ಯ ಇಲಾಖೆಯ ವತಿಯಿಂದ ಆನೆ ಕಂದಕ, ಸೋಲಾರ್,ರೈಲು ಕಂಬಿಯ ತಡೆಗೋಡೆ ನಿರ್ಮಿಸಿದ್ದರೂ ಆನೆಗಳು ನಿರಂತರ ಲಗ್ಗೆ ಇಡುತ್ತಿರುವುದು ಅರಣ್ಯ ಇಲಾಖೆ ಆನೆಗಳನ್ನು ನಿಯಂತ್ರಣಕ್ಕೆ ತರದಿರುವುದು ಆಕ್ರೋಷಕ್ಕೆ ಕಾರಣವಾಗಿದೆ. ಈ ಬಗ್ಗೆ ಆರ್.ಆರ್.ಟಿ ಟೀಂ ಗೆ ಮಾಹಿತಿ ಯನ್ನು ಮೇಲಿಂದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಾಡುತ್ತಿದ್ದ ಪರಿಣಾಮ ಎಚ್ಚೆತ್ತುಕೊಂಡಿದ್ದಾರೆ.