ಹೆಸರಿಗೆ ಮಾತ್ರ ಕುಶಾಲನಗರ ತಾಲ್ಲೂಕು: ಕರ್ನಾಟಕ ಕಾವಲುಪಡೆ ಅಸಮಾಧಾನ

ಕುಶಾಲನಗರ ತಾಲೂಕು ಘೋಷಣೆ ಯಾಗಿ ವರ್ಷ ಕಳೆದಿದ್ದರೂ ಅಧಿಕೃತವಾಗಿ ತಾಲೂಕಿಗೆ ಸಂಭಂದಿಸಿದ ಕಛೇರಿಗಳು ಬಂದಿಲ್ಲ ನೆಪಮಾತ್ರಕ್ಕೆ ಕೆಲವು ತಿಂಗಳುಗಳ ಹಿಂದೆ ಕುಶಾಲನಗರ ತಾಲೂಕು ದಂಡಾಧಿಕಾರಿಯಾಗಿ ನೇಮಕ ಮಾಡಿದ ಸರ್ಕಾರ ಆದರೆ ಅವರಿಗೆ ಇದುವರೆಗೆ ಯಾವುದೇ ಅಧಿಕಾರ ನೀಡಿಲ್ಲ ಎಲ್ಲಾ ಕಛೇರಿಯ ಕೆಲಸಕ್ಕೆ ಸೋಮವಾರಪೇಟೆ ತಹಶೀಲ್ದಾರ್ ಕಚೇರಿಗೆ ತೆರಳಬೇಕಾಗಿದ್ದು, ಕೋವಿಡ್ ಲಾಕ್ಡೌನ್ ಸಮಯದಲ್ಲಿ ಕುಶಾಲನಗರ ತಹಶೀಲ್ದಾರ್ ರವರಿಗೆ ಜವಾಬ್ದಾರಿ ನೀಡದೆ ಸುಮ್ಮನೆ ಕಛೇರಿಗೆ ಬಂದು ಹೋಗುವದಕ್ಕೆ ಏಕೆ ಬೇಕು ಈ ಸಮಯದಲ್ಲಿ ಕೋವಿಡ್ ಸೆಂಟರ್ ಗಡಿಯಲ್ಲಿ ಜವಾಬ್ದಾರಿ ನೀಡಬಹುದಿತ್ತು ಆದರೆ ಇನ್ನಾದರೂ ಸರ್ಕಾರ ಮತ್ತು ಜಿಲ್ಲಾ ಅಧಿಕಾರಿಗಳು ಕುಶಾಲನಗರ ತಹಶೀಲ್ದಾರ್ ಗೆ ಹೆಚ್ಚಿನ ಜವಾಬ್ದಾರಿ ನೀಡಿ ಕುಶಾಲನಗರ ತಾಲೂಕು ಕಚೇರಿ ಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಕುಶಾಲನಗರದಲ್ಲೇ ನಡೆಸುವಂತೆ ಸಾರ್ವಜನಿಕರ ಪರವಾಗಿ ಕರ್ನಾಟಕ ಕಾವಲುಪಡೆ ಅಧ್ಯಕ್ಷ ಕೃಷ್ಣ ಒತ್ತಾಯಿಸಿದಾದಾರೆ.

error: Content is protected !!