ಹೆಜ್ಜೇನು ದಾಳಿ ವ್ಯಕ್ತಿ ಸಾವು

ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಹೆಜ್ಜೇನು ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಹೆಬ್ಬಾಲೆ ಗ್ರಾಮದ ನಿವಾಸಿ ಪಾಟೇಲ್ ಪ್ರಕಾಶ್ (55 ವರ್ಷ) ಮೃತಪಟ್ಟ ದುರ್ದೈವಿಯಾಗಿದ್ದಾನೆ.

ರೈತ ಪ್ರಕಾಶ್ ಎಂದಿನಂತೆ ದನ ಹಾಗೂ ಎಮ್ಮೆಗಳನ್ನು ಮೇಯಿಸಲು ಹೋಗಿದ್ದ ವೇಳೆ ಗೌರಿಕೆರೆ ಎಂಬಲ್ಲಿ ಹೆಜ್ಜೇನು ದಾಳಿ ಮಾಡಿದೆ. ಹೆಜ್ಜೇನು ಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಕೆಳಕ್ಕೆ ಬಿದ್ದಿದ್ದಾರೆ.ಈ ಸಂದರ್ಭ ಹೆಜ್ಜೇನಿನ ನೋಣಗಳು ಸಂಪೂರ್ಣ ಮುತ್ತಿಗೆ ಹಾಕಿ ಕಚ್ಚಿವೆ. ಪ್ರಕಾಶ್ ಕೂಗಿಕೊಂಡರು ಅಕ್ಕಪಕ್ಕ ಯಾರು ಇಲ್ಲದ ಹಿನ್ನೆಲೆಯಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ನಂತರ ದಾರಿಯಲ್ಲಿ ಹೋಗುವ ಜನರು ನೋಡಿ ಕೂಡಲೇ ಪ್ರಕಾಶ್ ಅವರನ್ನು ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಯಿತು.ನಂತರ ವೈದ್ಯರು ಪರೀಕ್ಷಿಸಿ ಪ್ರಕಾಶ್ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದರು. ಮೃತರು ಪತ್ನಿ ಸೇರಿದಂತೆ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

error: Content is protected !!