ಹೃದಯ ವೈಶಾಲ್ಯತೆ ಮೆರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್!

ಬೆಂಗಳೂರು: ತಮ್ಮ ಬಾಲ್ಯದ ದಿನಗಳಲ್ಲಿ ಓಡಾಡಿದ ಕೆಎಸ್ ಆರ್ ಟಿಸಿ ಬಸ್ ಚಾಲಕನನ್ನು ಭೇಟಿಯಾದ ಕ್ಷಣಗಳನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಂಚಿಕೊಂಡಿದ್ದಾರೆ. 80 ವರ್ಷದ ಹಿರಿಯ ಚಾಲಕನ ಮನೆಗೆ ದರ್ಶನ್ ಭೇಟಿಕೊಟ್ಟಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಕಷ್ಟದ ದಿನಗಳಲ್ಲಿ ನೆರವಾದವರನ್ನು, ಹಳೆಯ ಒಡನಾಡಿಗಳನ್ನು ಯಾವತ್ತೂ ಮರೆಯಲ್ಲ. ಇದೀಗ ಅಂತಹದ್ದೇ ಫೋಟೋವೊಂದನ್ನು ಡಿ ಬಾಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿರುವ ದರ್ಶನ್ ‘ರೀಲ್ ಸಾರಥಿ ರಿಯಲ್ ಸಾರಥಿಯನ್ನು ಭೇಟಿಯಾದಾಗ. ನನ್ನ ಶಾಲಾ ದಿನಗಳಲ್ಲಿ ನಾನು ಸಂಚರಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್‍ ನ ಚಾಲಕರಾಗಿದ್ದವರು ಇವರು. ಇಂದು ಅವರ 80 ನೇ ಜನ್ಮದಿನ. ಅವರನ್ನು ಭೇಟಿಯಾಗಿ ಶುಭ ಹಾರೈಸಿ ಅವರಿಂದ ಆಶೀರ್ವಾದ ಪಡೆದೆ’ ಎಂದು ಬರೆದುಕೊಂಡಿದ್ದಾರೆ.

error: Content is protected !!