ಹುಲ್ಲಿನ ಮೆದೆಗೆ ಬೆಂಕಿ

ವಿದ್ಯುತ್ ತಂತಿಯಿಂದ ಆಕಸ್ಮಿಕ ಬೆಂಕಿ ತಗುಲಿ ಹುಲ್ಲಿನ ಮೆದೆ ಸುಟ್ಟು ಕರಕಲಾದ ಘಟನೆ ಕುಶಾಲನಗರ ತಾಲ್ಲೂಕಿನ ತೊರೆನೂರಿನಲ್ಲಿ ನಡೆದಿದೆ.

ಗ್ರಾಮದ ಶಾಂತಮಲ್ಲಪ್ಪ ಎಂಬುವವರಿಗೆ ಸೇರಿದ ಅಂದಾಜು 40 ಸಾವಿರ ಮೌಲ್ಯದ ಹುಲ್ಲನ್ನು ಜಮೀನಿನನಲ್ಲಿ ಜೋಡಿಸಿಟ್ಟಿದ್ದರು,ಆದರೆ ಜೋರಾಗಿ ಗಾಳಿ ಬೀಸುತ್ತಿದ್ದ ಹಿನ್ನೆಲೆಯಿಂದ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬದಿಂದ ಕಿಡಿ ಹಾರಿದ್ದು, ಬೆಂಕಿ ತಾರಕಕ್ಕೆ ಏರಿದ್ದು,ಕುಶಾಲನಗರ ಅಗ್ನಿಶಾಮಕ ದಳಕ್ಕೆ ಸುದ್ದಿ ತಿಳಿಸಿದ ಮೇಲೆ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

error: Content is protected !!