ಹುಲಿ ಹಾವಳಿ ತಡೆಗೆ ಬೀದಿಗಿಳಿದ ರೈತ ಸಂಘಟನೆ, ಗ್ರಾಮಸ್ಥರು

ದಕ್ಷಿಣಕೊಡಗಿನ ಭಾಗದಲ್ಲಿ ನಡೆಯುತ್ತಿರುವ ನಿರಂತರ ಹುಲಿ ದಾಳಿಯನ್ನು ಖಂಡಿಸಿ ಪೂನ್ನಂಪೇಟೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಕೊಡಗು ಘಟಕ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಸಂಘದ ಅಧ್ಯಕ್ಷ ಮನು ರವರ ನೇತೃತ್ವದಲ್ಲಿ ನನ್ನೆದೆಯ ಕುಂದ ಗ್ರಾಮ ದಲ್ಲಿ ನಡೆದ ಹುಲಿ ದಾಳಿ ಸೇರಿದಂತೆ ನಿರಂತರ ಹುಲಿದಾಳಿಯಾಗುತ್ತಿರುವ ಬಗ್ಗೆ ಅರಣ್ಯ ಇಲಾಖೆಯ ಗಮನದಲ್ಲಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸಲಾಯಿತು.