ಹುಲಿ ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರ ಬಂಧನ

ಪೊನ್ನಂಪೇಟೆ ತಾಲೂಕು ಗೋಣಿಕೊಪ್ಪದ ಚನ್ನಗೋಲ್ಲಿ ಬಳಿ ಇರುವ ಸಾರ್ವಜನಿಕ ಬಸ್ ತಂಗುದಾಣದ ಬಳಿ ಅಕ್ರಮವಾಗಿ 6 ಹುಲಿ ಹಲ್ಲುಗಳನ್ನು ಗಿರಾಕಿಗಳಿಗೆ ಮಾರಾಟ ಮಾಡಲು KA- 12-4739 ರ ಟಿ.ವಿ.ಎಸ್ ಸ್ಕೂಟಿ ಹಾಗೂ KA.12-L-3137ಟಿ.ವಿ.ಎಸ್ ಸ್ಟಾರ್ ಸಿಟಿ ಮೋಟಾರು ಸೈಕಲಿನಲ್ಲಿ ವ್ಯವಹರಿಸುತ್ತಿದ್ದ ಬಗ್ಗೆ ಸಿಕ್ಕಿದ್ದ ಖಚಿತ ಮಾಹಿತಿಯ ಮೇರೆಗೆ ವಿರಾಜಪೇಟೆ ತಾಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಹಾಗೂ ತಿತಿಮತಿ ಪ್ರಾದೇಶಿಕ ವಲಯ ಅರಣ್ಯ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಾಲ್ಕು ಆರೋಪಿಗಳನ್ನು ಎರಡು ದ್ವಿಚಕ್ರ ವಾಹನಗಳ ಸಮೇತ ಮಾಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಯಶ್ವಸಿಯಾಗಿರುತ್ತಾರೆ.

ಬಂಧಿತ ಆರೋಪಿಗಳನ್ನು ದಿನಾಂಕ 9.11.2021 ರಂದು ಪೊನ್ನಂಪೇಟೆಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.

ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಕಾರ್ಯಾಚರಣೆಯಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಮಹಾನಿರೀಕ್ಷಕರಾದ ಮಾನ್ಯ ಶ್ರೀ ಕೆ.ವಿ ಸರತ್ ಚಂದ್ರ, ಐಪಿಎಸ್ ರವರ ನಿರ್ದೇಶನದ ಮೇರೆಗೆ, ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ. ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್ ಸುರೇಶ್ ಬಾಬುರವರ ಮಾರ್ಗದರ್ಶನದಲ್ಲಿ, ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಆರಕ್ಷಕ ಉಪನಿರೀಕ್ಷಕರಾದ ವೀಣಾ ನಾಯಕ್, ಸಿಬ್ಬಂದಿಗಳಾದ ಟಿ.ಪಿ ಮಂಜುನಾಥ, ದೇವಯ್ಯ ಕೆ ಎಸ್,ಬೀನಾ ಸಿ.ಬಿ.ಹಾಗೂ ಎಸ್.ಎಂ ಯೋಗೇಶ್ ಹಾಗೂ ತಿತಿಮತಿ ಉಪ ವಿಭಾಗದ ಎ.ಸಿ.ಎಫ್ ಉತ್ತಯ್ಯ ಪಿ.ಪಿ,ವಲಯ ಅರಣ್ಯಧಿಕಾರಿ ಅಶೋಕ್, ಪಿ.ಹನುಗುಂದ, ಉಪ ವಲಯ ಅರಣ್ಯಾಧಿಕಾರಿಗಳಾದ ಎ.ಎಸ್ ಉಮಾಶಂಕರ್, ಹಾಲೇಶ್ಎ.ಪಿ,ಹಾಗೂ ಸಿಬ್ಬಂದಿಗಳಾದ ಟಿ. ಪಿ. ಮಂಜುನಾಥ್.ಟಿ.ಜಿ ಸುರೇಶ್,ಜಿ.ಎಸ್ ರೇವಪ್ಪ ದರ್ಶನ್. ಎಂ.ಎಂ, ಗಗನ್. ಬಿ.ಎ. ರವರು ಭಾಗವಹಿದ್ದರು.

ಬಂಧಿತ ಆರೋಪಿಗಳು

ಒಂದನೇ ಆರೋಪಿ:- ಗಣೇಶ ವೈ.ಸಿ.ತಂದೆ ಚಂದ್ರು ಪ್ರಾಯ 20 ವರ್ಷ ಸುಳುಗೋಡು ಗ್ರಾಮ ಪೋನ್ನಂಪೇಟೆ._
ಎರಡನೆಯ ಆರೋಪಿ:- ಸಂತೋಷ್ ಕೆ.ವಿ.ತಂದೆ ವೇಣು.ಕೆ.ಪ್ರಾಯ 25 ವರ್ಷ ಕೋತೂರು ಗ್ರಾಮ, ಪೋನ್ನಂಪೇಟೆ.
ಮೂರನೆಯ ಆರೋಪಿ:- ಸಂತೋಷ್ ಕುಮಾರ್ ಹೆಚ್. ಆರ್.ತಂದೆ ಎಚ್.ಕೆ ರಾಜು ಪ್ರಾಯ 29 ವರ್ಷ ಸುಳುಗೋಡು ಗ್ರಾಮ, ಪೋನ್ನಂಪೇಟೆ._
ನಾಲ್ಕನೆಯ ಆರೋಪಿ:- ಪೆಮ್ಮಂಡ ಪವನ್ ಪೂವಯ್ಯ, ತಂದೆ ಸೋಮಯ್ಯ, ಪ್ರಾಯ 30 ವರ್ಷ ಚಿಕ್ಕಮುಂಡೂರು ಗ್ರಾಮ ಪೊನ್ನಂಪೇಟೆ._
ಅಧಿಕಾರಿಗಳಿಂದ ಮುಂದಿನ ತನಿಖೆ ಆರಂಭಿಸಲಾಗಿದೆ.

error: Content is protected !!