ಹುಲಿ ಪ್ರತ್ಯಕ್ಷ-ಬೋನ್ ಅಳವಡಿಕೆ

ಕೊಡಗು: ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ ತಹಬದಿಗೆ ಬರುತ್ತಿದ್ದಂತೆ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದಗೂರು ಮೀಸಲು ಅರಣ್ಯ ಪ್ರದೇಶ ಮತ್ತು ಯಲಕನೂರು ಸಮೀಪದ ಅರೆಯೂರಿನಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾದ ಹಿನ್ನಲೆಯಲ್ಲಿ ಆತಂಕ ಉಂಟುಮಾಡಿದ್ದು, ಮೂರು ದಿನಗಳ ಹಿಂದೆಯಷ್ಟೆ ಅರೆಯೂರು ಗ್ರಾಮದಲ್ಲಿ ಈರಪ್ಪ ಎಂಬುವವರ ಹಸುವೊಂದನ್ನು ಬಲಿ ತೆಗೆದುಕೊಂಡಿತ್ತು.
ಈ ಹಿನ್ನಲೆಯಲ್ಲಿ ದಾಳಿ ನಡೆದ ಪ್ರದೇಶದ ಕಾಫಿ ತೋಟ ಮತ್ತು ಅರಣ್ಯ ಅಂಚಿನ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಭಾಗದಲ್ಲಿ ಬೋನ್ ಇರಿಸಲಾಗಿದ್ದು,ರಾತ್ರಿ ಹೊತ್ತಿನಲ್ಲಿ ನಾಯಿಯೊಂದನ್ನು ಕಟ್ಟಲಾಗುತ್ತಿದೆ.