ಹುಲಿ ದಾಳಿ ಸರಣಿ ಪ್ರಕರಣ: ಹುದಿಕೇರಿ ಹೋಬಳಿಯಲ್ಲಿ ಸೆಕ್ಷನ್ 144 ಜಾರಿ!

ಪೊನ್ನಂಪೇಟೆ: ಬೆಳ್ಳೂರು ಗ್ರಾಮದಲ್ಲಿ ಹುಲಿ ಬಲಿಯಿಂದಾಗಿ ಇಂದು ಇಬ್ಬರ ಆರೋಗ್ಯ ಸ್ಥಿತಿ ಗಂಭೀರ ಆಗಿರುವುದರಿಂದ ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ತೀವ್ರವಾದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೇರಳಕ್ಕೆ ಸಂಪರ್ಕ ಬೆಳೆಸಲು ಇರುವ ಅಂತರಾಜ್ಯ ಹೆದ್ದಾರೆ ತಡೆದು ಪ್ರತಿಭಟನೆ ನಡೆಸಲಾಗುತ್ತಿತ್ತು. ಪ್ರತಿಭಟನೆಯ ತೀವ್ರತೆಯನ್ನು ಅರಿತು ವಿರಾಜಪೇಟೆ ತಹಶೀಲ್ದಾರರು ನಿಷೇಧಾಜ್ಞೆ ಆದೇಶ ನೀಡಿದ್ದಾರೆ.
ಕೊಡಗಿನಲ್ಲಿ ಹುಲಿದಾಳಿಗೆ ಇತ್ತೀಚೆಗೆ ಹಲವಾರು ಜಾನುವಾರುಗಳು ಹಾಗು 3 ನರ ಬಲಿಗಳಾಗಿವೆ. ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವೂ ಆಗಿದೆ!