ಹುಲಿ ದಾಳಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರದ ಚಿಕ್ ಹಸ್ತಾಂತರ

ಮಡಿಕೇರಿ ಏ.8 : ದಕ್ಷಿಣ ಕೊಡಗಿನ ವಿ.ಭಾಡಗ ಸಮೀಪದ ತೋಟವೊಂದರಲ್ಲಿ ಇತ್ತೀಚೆಗೆ ಮೆಣಸು ಕುಯ್ಯುವ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಹುಲಿ ದಾಳಿಗೆ ತುತ್ತಾಗಿ ಮೃತಪಟ್ಟ ಗದ್ದೆ ಮನೆ ನಿವಾಸಿ ಗಣೇಶ್(29) ಅವರ ಅತ್ತೂರು ಬಳಿಯ ನಿವಾಸಕ್ಕೆ ಅರಣ್ಯ ಸಚಿವ ಉಮೇಶ್ ಕತ್ತಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನಿಸಿದರು.

ಈ ಸಂದರ್ಭದಲ್ಲಿ ಮೃತ ಕುಟುಂಬದವರಿಗೆ 5.50 ಲಕ್ಷ ರೂ. ಚೆಕ್ ಹಸ್ತಾಂತರಿಸಿದರು. ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಪಶ್ಚಿಮ ಘಟ್ಟ ಕಾರ್ಯಪಡೆಯ ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿಕುಶಾಲಪ್ಪ ಇತರರು ಹಾಜರಿದ್ದರು.