ಹುಲಿ ದಾಳಿಗೆ ಜಾನುವಾರುಗಳು ಬಲಿ

ಕೊಡಗು: ಹುಲಿಗಳ ಆವಾಸತಾಣದಂತಾಗಿರುವ ದಕ್ಷಿಣಕೊಡಗಿನಲ್ಲಿ ಮತ್ತೆ ಹುಲಿ ದಾಳಿ ನಡೆದಿದೆ. ಪೊನ್ನಂಪೇಟೆ ತಾಲೂಕಿನ ತಾವಳಗೇರಿ ಗ್ರಾಮದಲ್ಲಿ ಮಚ್ಚಾಮಾಡ ಗೋಪಿ ಪೆಮ್ಮಯ್ಯ ಮತ್ತು ಪೂವಣ್ಣ ರವರ ಎರಡು ಹಸುಗಳನ್ನು ಕೊಟ್ಟಿಗೆಯಲ್ಲೇ ಹುಲಿ ಕೊಂದು ಹಾಕಿದೆ.ಒಂದು ಭಾಗದಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿದ್ದರೆ,ಇನ್ನೊಂದೆಡೆ ಕನಿಷ್ಟ ದಿನಕ್ಕೊಂದರಂತೆ ಜಾನುವಾರುಗಳು ಬಲಿಯಾಗುತ್ತಿರುವುದು ಸಾಕಷ್ಟು ಆತಂಕದ ಜೊತೆಗೆ ರೈತರಿಂದ ಆಕ್ರೋಶ ಸ್ಪೋಟಗೊಳ್ಳುತ್ತಿದೆ.ಇತ್ತ ಅತ್ತೂರಿನ ಗದ್ದಮನೆ ಎಂಬಲ್ಲಿನ ಕಾಫಿ ತೋಟದ ಕೆಲವೆಡೆ ಮತ್ತು ವಿರಾಜಪೇಟೆಯ ಮಗ್ಗುಲ ಗ್ರಾಮದ ಜಗದೀಶ್ ಎಂಬುವವರ ಕಾಫಿ ತೋಟದಲ್ಲಿ ಹುಲಿಯ ಹೆಜ್ಜೆಗುರುತುಗಳು ಪತ್ತೆಯಾಗಿದೆ.