fbpx

ಹುಲಿ ದಾಳಿಗೆ ಒಳಗಾಗಿ ಮೃತ ಪಟ್ಟ ಕಾರ್ಮಿಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಶಾಸಕ ಬೋಪಯ್ಯ

ಕೋತೂರಿನಲ್ಲಿ ಹುಲಿ ದಾಳಿಗೆ ಮೃತರಾಗಿದ್ದ ಬೊಮ್ಮಾಡು ಹಾಡಿ ನಿವಾಸಿ ರಾಜು(52) ಎಂಬವರರ ಮನೆಗೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಭಾಗದಲ್ಲಿ ಹುಲಿ ದಾಳಿ ನಿರಂತರವಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕ್ರಮಕೈಗೊಳ್ಳಬೇಕು. ದಾಳಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದರು.

ಈ ಸಂದರ್ಭ ನಾಲ್ಕೇರಿ ಉಪಾಧ್ಯಕ್ಷರಾದ ಸಚಿನ್ ಪೆಮ್ಮಯ್ಯ ಚಿರಿಯಪಂಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ, ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಈಶ್ವರ್ ಕಟ್ಟೇರ, ಪ್ರಧಾನ ಕಾರ್ಯದರ್ಶಿ ನವೀನ್ ಅಣ್ಣಳಮಾಡ ಹಾಗೂ ಇತರರಿದ್ದರು.

error: Content is protected !!