ಹುಲಿಗಳ ದಾಳಿ ತಡೆಗೆ ವಿಶೇಷ ಕಾರ್ಯ ಪಡೆ ರಚನೆ

ಕೊಡಗಿನ ರುದ್ರಗುಪ್ಪೆಯಲ್ಲಿ ನಡೆದ ಹುಲಿ ದಾಳಿಗೆ ಕಾರ್ಮಿಕ ಬಲಿಯಾದ ಪ್ರಕರಣ ಸಂಬಂಧ ಹುಲಿ ಸೀರೆಗಳ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ ಎಂದು ವಿರಾಜಪೇಟೆ ಅರಣ್ಯ ವಿಭಾಗದ ಅಧಿಕಾರಿ ಡಿಸಿಎಫ್ ಚಕ್ರಪಾಣಿ ತಿಳಿಸಿದ್ದಾರೆ.

ಹುಲಿಯ ಚಟುವಟಿಕೆಗಳು ಸಂಜೆಯಿಂದ ಬೆಳಗಿನವರೆಗೆ ಸಂಚಾರವನ್ನು ಗಮನಿಸಿ ಕಾರ್ಯಾಚರಣೆ ನಡೆಸಲಾಗುವುದು. ಇದಕ್ಕಾಗಿ 60 ಕ್ಯಾಮರಾ, 150 ಸಿಬ್ಬಂದಿ, ಎರಡು ಸಾಕಾನೆಗಳು, ಅರವಳಿಕೆ ತಜ್ಞರಿಂದ ಕಾರ್ಯಾಚರಣೆ ನಡಸಲಾಗುವುದುದು ಎಂದರು.

error: Content is protected !!