ಹುತಾತ್ಮ ಯೋಧ ಅಲ್ತಾಫ್ ಅಹಮದ್ ಪಾರ್ಥಿವ ಶರೀರ ವಿರಾಜಪೇಟೆಗೆ ಆಗಮನ: ದೇಶಭಕ್ತರಿಂದ ಅಂತಿಮ ದರ್ಶನ, ಭಾವಪೂರ್ವ ವಿದಾಯ

ಹುತಾತ್ಮ ಯೋಧ ಅಲ್ತಾಫ್ ಅಹಮದ್ ಅವರು

ಅಪಾರ ದೇಶ ಭಕ್ತಿ ಹೊಂದಿದ್ದ ಕೊಡಗಿನ ವಿರಾಜಪೇಟೆ ಮೂಲದವರಾದ ಅಲ್ತಾಫ್ ಅಹಮದ್ ಇತ್ತೀಚೆಗಷ್ಟೆ ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿದ್ದು, ಇಂದು ಬೆಳಗಿನ ಜಾವ ವಿರಾಜಪೇಟೆಗೆ ಆಗಮಿಸಿದ್ದು ಇಲ್ಲಿನ ತಾಲ್ಲೂಕು ಮೈದಾನ ದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು.

ಇದಕ್ಕೂ ಮೊದಲು ಪೊಲೀಸ್ ತುಕಡಿಯ ಮತ್ತು ಸೇನೆಯ ಅಂತಿಮ ನಮನ ಸಲ್ಲಿಸಿದ ನಂತರ ಸೇನಾಧಿಕಾರಿ ತಿರಂಗವನ್ನು ಎಓಸಿ ಯೋಧ ಅಲ್ತಾಫ್ ಅಹಮದ್ ಜುಬೇರಿಯಾರಿಗೆ ಹಸ್ತಾಂತರ ಮಾಡುತ್ತಿದ್ದಂತೆ ಕುಸಿದು ಬಿದ್ದರು,ಏನೂ ಅರಿಯದ ಪುತ್ರಿ ಜಾಸ್ಮೀನ್, ಪುತ್ರ ಮಹಮದ್ ಅಫ್ರಿದ್ ಸೇನಾ ಉಡುಪಿನಲ್ಲಿ ತಂದೆಗೆ ಗೌರವ ಸಲ್ಲಿಸಿದರು. ಬಳಿಕ ಪೊಲೀಸ್ ಮತ್ತು ಸೇನಾ ತುಕಡಿಯಿಂದ ಅಂತಿಮ ಗೌರವ ಸಲ್ಲಿಸಿದರು, ಶಾಸಕ ಕೆ.ಜಿ ಬೋಪಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಎಸ್ಪಿ ಅಯ್ಯಪ್ಪ ಸೇರಿಂದಂತೆ ಹಲವು ಗಣ್ಯರಿಂದ ಪುಷ್ಪ ನಮನ ಮೂಲಕ ಗೌರವ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.

error: Content is protected !!