ಹುಣಸೆ ತೋಪು ಪಾರಂಪರಿಕ ತಾಣಕ್ಕೆ ರವಿ ಕಾಳಪ್ಪ ಭೇಟಿ

ಮಡಿಕೇರಿ : ಬೆಂಗಳೂರಿನ ದೇವನಹಳ್ಳಿಯ ನಲ್ಲೂರಿನಲ್ಲಿರುವ ಹುಣಸೆ ತೋಪು ಜೀವವೈವಿಧ್ಯ ಪಾರಂಪರಿಕ ತಾಣಕ್ಕೆ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದರು.
ಚೋಳರ ಕಾಲದಲ್ಲಿ ನೆಡಲಾದ ಹುಣಸೆ ಗಿಡಗಳು ಇಲ್ಲಿದ್ದು, ಸುಮಾರು 500 ವರ್ಷದ ಇತಿಹಾಸವಿರುವ ಪ್ರದೇಶವಾಗಿದೆ. ಜೀವ ವೈವಿಧ್ಯ ಮಂಡಳಿ ವತಿಯಿಂದ ಮೊದಲ ಬಾರಿಗೆ ಪಾರಂಪರಿಕ ತಾಣವಾಗಿ ಘೋಷಿಸಲ್ಪಟ್ಟ ಪ್ರದೇಶ ಇದು. ಸ್ಥಳೀಯ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಕ್ಷೇತ್ರವನ್ನು ನಿರ್ವಹಣೆ ಮಾಡುತ್ತಿದೆ. ಮಂಡಳಿಯಿಂದ ನೀಡಿರುವ ಅನುದಾನ ಬಳಸಿಕೊಂಡು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ರವಿ ಕಾಳಪ್ಪ ಸೂಚಿಸಿದರು. ಸ್ಥಳೀಯ ಜನಪ್ರತಿನಿಧಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಈ ಸಂದರ್ಭ ಇದ್ದರು.