ಹುಡುಗಿ ಹುಡುಕಿ ಕೊಡಿ ಎಂದ ಕುಳ್ಳನನ್ನು ಭೇಟಿಯಾದ ಸಲ್ಲು

ನೋಯ್ಡಾ: ಕುಳ್ಳನೆಯ ವ್ಯಕ್ತಿಯೊಬ್ಬ ಮದುವೆಯಾಗಲು ಹುಡುಗಿ ಹುಡುಕಿಕೊಡಿ ಎಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆ ಸುದ್ದಿಯ ಬೆನ್ನಲ್ಲೇ ಇದೀಗ ವಧುವಿನ ನಿರೀಕ್ಷೆಯಲ್ಲಿರುವ ಯುವಕನನ್ನು ಭೇಟಿ ಮಾಡಲು ಬಾಲಿವುಡ್​ ನಟ ಸಲ್ಮಾನ್​ ಖಾನ್ ಮುಂದಾಗಿದ್ದಾರೆ.

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಮನ್ಸೂರಿ (26) ಇತ್ತೀಚೆಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ. ಅಲ್ಲಿದ್ದ ಮಹಿಳಾ ಪೊಲೀಸರ ಮುಂದೆ ಕುಳಿತು ತನ್ನ ಅಳಲನ್ನು ತೋಡಿಕೊಂಡಿದ್ದ. ನಾನು ಇರೋದು 2 ಅಡಿ 3 ಇಂಚು. ನಮ್ಮನೆಗೆ ಬರುವ ವಧುವಿನ ಕಡೆಯವರೆಲ್ಲ ನನ್ನ ಎತ್ತರ ಸಾಲದು ಎಂದು ವಾಪಾಸು ಹೋಗುತ್ತಾರೆ. ನಾನು ಕಾಸ್ಮೆಟಿಕ್ ಅಂಗಡಿ ಇಟ್ಟುಕೊಂಡಿದ್ದೇನೆ. ಕುಟುಂಬಕ್ಕೆ ಬೇಕಾಗುವಷ್ಟು ಹಣ ಸಂಪಾದನೆ ಮಾಡುತ್ತಿದ್ದೇನೆ. ಆದರೂ ಯಾರೂ ಹೆಣ್ಣು ಕೊಡುತ್ತಿಲ್ಲ.

ನಮ್ಮ ಮನೆಯವರೂ ಹುಡುಗಿ ಹುಡುಕುವ ಕೆಲಸವನ್ನು ಮಾಡುತ್ತಿಲ್ಲ. ಸಾರ್ವಜನಿಕ ಸೇವೆಗಿರುವ ನೀವಾದರೂ ನನಗೆ ಹುಡುಗಿ ಹುಡುಕಿಕೊಡಿ ಎಂದು ಕೇಳಿಕೊಂಡಿದ್ದ.

ಪೊಲೀಸರ ಎದುರು ಈ ರೀತಿಯ ವಿಚಿತ್ರ ಬೇಡಿಕೆಯನ್ನಿಟ್ಟು ಸಕತ್​ ವೈರಲ್​ ಆಗಿತ್ತು. ಅದೇ ಕಾರಣದಿಂದಾಗಿ ಸಲ್ಮಾನ್​ ಖಾನ್​ ಕೂಡ ಮನ್ಸೂರ್​ನನ್ನು ಭೇಟಿ ಮಾಡುವ ಮನಸ್ಸು ಮಾಡಿದ್ದಾರೆ. ಮುಂಬೈಗೆ ಬರುವಂತೆ ಹೇಳಿದ್ದಾರೆ. ಅವರು ಮನ್ಸೂರ್​ನೊಂದಿಗೆ ಏನು ಮಾತನಾಡಲಿದ್ದಾರೆ? ಹುಡುಗಿಯನ್ನು ಹುಡುಕಿ ಕೊಡಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸೀಸ್​)

error: Content is protected !!