fbpx

ಹುಟ್ಟುಹಬ್ಬದ ಶುಭಾಶಯಗಳು: ಮೋಹನ್ ಭಾಗವತ್ ಜೀ

ಈ ಹೆಸರು ಕೇಳಿದೊಡನೆ ಕೋಟ್ಯಂತರ ಸ್ವಯಂಸೇವಕರಲ್ಲಿ ಗೌರವದ ಮನೋಭಾವನೆ ಮೂಡುತದೆ. ಈ ಹೆಸರಿಗಿರುವ ಶಕ್ತಿಯೇ ಅದು…

ವಿಶ್ವದ ಅತೀ ದೊಡ್ಡ ಸ್ವಯಂಸೇವಾ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ದ ಸರಸಂಚಾಲಕರಾದ ಮೋಹನ್ ಭಾಗವತ್ ಜೀ ಯವರ ಪೂರ್ಣ ಹೆಸರು ಡಾ. ಮೋಹನ್ ಮಧುಕರ್ ಭಾಗವತ್. ಇವರು 11 ಸೆಪ್ಟೆಂಬರ್ 1950 ರಲ್ಲಿ ಮಹಾರಾಷ್ಟ್ರದ ಚಂದ್ರಪುರ್ ಎಂಬಲ್ಲಿ ಜನಿಸಿದರು. ಇವರ ಇಡೀ ಕುಟುಂಬವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯವಾಗಿ ತೊಡಗಿರುವುದು ತಮ್ಮ ಧರ್ಮಭಕ್ತಿಯನ್ನು ಎತ್ತಿ ತೋರಿಸುತದೆ. ನಾಗಪುರದ ಲೋಕಮಾನ್ಯ ತಿಲಕ್ ವಿದ್ಯಾಲಯದಲ್ಲಿ ಬಿ. ಎಸ್ಸಿ. ಪದವಿ ಪಡೆದಿದ್ದಾರೆ. 1975 ನೇ ಇಸವಿಯಲ್ಲಿ RSS ನಾ ಸರಸಂಘಚಾಲಕರಾದರು. 1977 ರಲ್ಲಿ ಅವರು ಆರ್. ಎಸ್. ಎಸ್. ನಾ ಪ್ರಚಾರಕರಾದರು.

ತಮ್ಮ ಉತ್ತಮ ಜ್ಞಾನದ ಮೂಲಕ ಹಿಂದುತ್ವ ದ ಜಾಗೃತಿ ಕೆಲಸವನ್ನು ಮಾಡುತ್ತ ಸಾರ್ಥಕಜೀವನ ನಡೆಸುತ್ತಿದ್ದಾರೆ. ಹಿಂದೂಗಳ ಅಭಿವೃದ್ಧಿ, ಹಿಂದೂ ಧರ್ಮದ ಶ್ರೇಷ್ಠತೆ, ಸೇವೆಯ ಮಹತ್ವ ಮುಂತಾದ ವಿಷಯಗಳಲ್ಲಿ ಉತ್ತಮ ಭಾಷಣ ನೀಡುತ್ತಾ ಅದೆಷ್ಟೋ ಯುವಕರಲ್ಲಿ ಧರ್ಮಪ್ರೇಮ ತುಂಬುವ ಕೆಲಸವನ್ನು ಕಳೆದ ಸುಮಾರು ವರ್ಷಗಳಿಂದ ಮಾಡುತ್ತಿದ್ದಾರೆ.

ಮೋಹನ್ ಭಾಗವತ್ ಜೀಯವರಿಗೆ ಜೀವ ಬೆದರಿಕೆ ಇರುವುದರಿಂದ ವಿಶೇಷ ತರಬೇತಿ ಪಡೆದಿರುವ ಕಮಾಂಡೋಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇವರಿಗೆ ಕೇಂದ್ರ ಗೃಹ ಇಲಾಖೆ ಝೆಡ್. ಪ್ಲಸ್ ಭದ್ರತೆ ಒದಗಿಸಿದೆ. ಸಿ. ಐ. ಎಸ್. ಎಫ್. ವಿಶೇಷ ಕಮಾಂಡೋಗಳಿರುವ ತಂಡವೊಂದು ಭಾಗವತ್ ಜಿಯವರಿಗೆ ಸೆಕ್ಯೂರಿಟಿ ನೀಡುತ್ತಲಿದೆ.

ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು ಮೋಹನ್ ಭಾಗವತ್ ಜಿ. ನಿಮ್ಮ ಧರ್ಮಪ್ರೇಮ, ಸೇವಾ ಮನೋಭಾವನೆ ಇತರರಿಗೆ ಮಾದರಿಯಾಗಲಿ. ದೇವರು ಆಶೀರ್ವಾದ ಸದಾ ನಿಮಗೆ ಶ್ರೀರಕ್ಷೇಯಾಗಿರಲಿ ಎಂದು ಶುಭಹಾರೈಸುತ್ತೇನೆ…

•ರಾಷ್ಟ್ರವಾದಿ ಪ್ರತೀಕ್ ಪರಿವಾರ

 

error: Content is protected !!