ಹೀಗೊಬ್ಬ ಮಾನಸಿಕ ಅಸ್ವಸ್ಥ ಟ್ಯಾಕ್ಸ್ ಆಫಿಸರ್!


ಕೊಡಗು: ಕೊರೊನಾ ತಡೆಗೆ ಹಗಲು ರಾತ್ರಿ ಎನ್ನದೆ ಎಲ್ಲಾ ಇಲಾಖೆ ಅಧಿಕಾರಿಗಳು ದುಡಿಯುತ್ತಿದ್ದರೆ, ಇಲ್ಲೊಬ್ಬ ವ್ಯಕ್ತಿ ತಾನು ನೂತನವಾಗಿ ಬಂದಿರುವ ಟ್ಯಾಕ್ಸ್ ಆಫಿಸರ್ ಎಂದು ವಿರಾಜಪೇಟೆಯ ತಾಲ್ಲೂಕು ಕಛೇರಿಗೆ ನುಗ್ಗಿ ಖಾಲಿ ಇದ್ದ ಶಿರೆಸ್ತೇಧಾರ್ ಕುರ್ಚಿಯಲ್ಲಿ ಕುಳಿತು ಅವಾಂತರ ಸೃಷ್ಠಿಸಿರುವ ಘಟನೆ ನಡೆದಿದೆ.

ತಾನು ಜನರ ಕಷ್ಟ ತಿಳಿದು ಇಲ್ಲಿಗೆ ಆಗಮಿಸಿದ್ದು, ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ತಲೆಗೆ ಬಿಳಿ ಟೋಪಿ, ಜುಬ್ಬ ಧರಿಸಿದ ವ್ಯಕ್ತಿ ಸಮಜಾಯಿಷಿ ನೀಡಿದ್ದಾನೆ. ಈತನ ವರ್ತನೆ ಕಂಡು ಗಾಬರಿಗೊಂಡ ಸಿಬ್ಬಂಧಿಗಳು ತಕ್ಷಣ ಪೋಲಿಸರಿಗೆ ತಿಳಿಸಿದ್ದು, ಆತನನ್ನು ಹೊರಗಟ್ಟಿ ಪೊಲೀಸರು ತಮ್ಮ ವಶಕ್ಕೆ ಪಡೆದಿದುಕೊಂಡಿದ್ದು, ಟ್ಯಾಕ್ಸ್ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿ ಮಾಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ.

error: Content is protected !!