ಹಿರಿಯ ನಟ ಶಂಕನಾದ ಅರವಿಂದ್ ನಿಧನ

ಬೆಂಗಳೂರು: ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ಬೆಟ್ಟದ ಹೂವು ಚಿತ್ರದಲ್ಲಿ ವಿದೇಶಿಯರಿಗೆ ಅಡುಗೆ ಭಟ್ಟನ ಪಾತ್ರದ ಮೂಲಕ ಗಮನ ಸೆಳೆದು ಪುನಿತ್ ರಾಜ್ ಕುಮಾರ್ ಜೊತೆ ಅಭಿನಯಿಸಿದ್ದ ಶಂಕನಾದ ಅರವಿಂದ್ ಕೋವಿಡ್ ಸೋಂಕಿನಿಂದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದ್ದಾರೆ.

70 ವರ್ಷದ ಅರವಿಂದ್ ಹಲವು ಕಾದಂಬರಿ ಆದರಿತ ,ಗ್ರಾಮೀಣ ಸೋಗಡಿನ ಚಿತ್ರಗಳಲ್ಲಿ ನಟಿಸಿದ್ದು,ದಿ.ಕಾಶಿನಾಥ್ ರವರ ತಂಡದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರಲ್ಲದೆ ಕೆಲವು ಚಿತ್ರಗಳ ನಿರ್ದೇಶನ ಸಹ ಮಾಡಿದ್ದಾರೆ.ಇತ್ತೀಚೆಗೆ ತಮ್ಮ ಪತ್ನಿ ನಿಧನವಾದ ಬಳಿಕ ಅರವಿಂದ್ ರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು 10 ದಿನಗಳ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

error: Content is protected !!