ಹಿಮಪಾತದಲ್ಲಿ ಸಿಲುಕಿ ಕೊಡಗಿನ ಯೋಧನ ಸಾವು!

ಶ್ರೀನಗರದಲ್ಲಿ ಕರ್ತವ್ಯದಲ್ಲಿದ್ದ ಕೊಡಗು ಮೂಲದ ಯೋಧರೊಬ್ಬರು ಹಿಮಪಾತದಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.
ಎಒಸಿ ರೆಜಿಮೆಂಟ್ ನಲ್ಲಿ ಹವಾಲ್ದಾರ್ ರಾಗಿದ್ದ ಅಲ್ತಾಫ್ ಅಹಮದ್ 37 ಹುತಾತ್ಮ ಯೋಧರಾಗಿದ್ದು, ವಿರಾಜಪೇಟೆಯ ಮೀನುಪೇಟೆಯಲ್ಲಿ ಹುಟ್ಟಿ ಬೆಳೆದು ದ್ವಿತೀಯ ಪಿಯುಸಿ ವರೆಗಿನ ವ್ಯಾಸಂಗ ಸಹ ಮಾಡಿದ್ದರು. ಕಳೆದ 19 ವರ್ಷದಿಂದ ದೇಶ ಸೇವೆ ಮಾಡಿಕೊಂಡು ಬರುತ್ತಿದ್ದು, ನಿವೃತ್ತಿಯ ಹೊಸ್ತಿಲಿನಲ್ಲಿದ್ದರು ಎನ್ನಲಾಗಿದೆ.
ಸದ್ಯ ಕಳೆದ 10 ವರ್ಷಗಳಿಂದ ಕೇರಳದ ಮಟ್ಟನೂರಿನಲ್ಲಿ ಅಲ್ತಾಫ್ ಕುಟುಂಬ ನೆಲೆಸಿದ್ದು, ಅಲ್ತಾಫ್ ಸಾವನ್ನಪ್ಪಿರುವ ಸುದ್ದಿ ಧೃಡಪಡಿಸಿದ್ದಾರೆ.