ಹಿಜಾಬ್ ವಿವಾದದ ತ್ವರಿತ ವಿಚಾರಣೆಗೆ ಸುಪ್ರಿಂ ನಕಾರ

ಶಾಲಾ – ಕಾಲೇಜುಗಳಲ್ಲಿ ಹಿಜಾಬ್​ ಧರಿಸುವಂತಿಲ್ಲ ಎಂಬ ರಾಜ್ಯ ಹೈಕೋರ್ಟ್ ಆದೇಶದ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಹೋಳಿ ಹಬ್ಬದ ರಜೆಯ ಬಳಿಕ ಈ ಮೇಲ್ಮನವಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಹೇಳಿದೆ.

ರಾಜ್ಯದಲ್ಲಿ ಭಾರೀ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದ ಹಿಜಾಬ್​ ಪ್ರಕರಣದ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು.

ಇದಾದ ಬಳಿಕ ಸುಪ್ರಿಂ ಮೆಟ್ಟಿಲೇರಿದ್ದ ಅರ್ಜಿದಾರರು ತುರ್ತು ವಿಚಾರಣೆ ನಡೆಸುವಂತೆ ಕೋರಿದ್ದರು. ಸೋಮವಾರವೇ ತುರ್ತು ವಿಚಾರಣೆ ನಡೆಯಬೇಕು ಎಂಬ ಮನವಿಯನ್ನು ಸಿಜಿಐ ಎನ್​.ವಿ. ರಮಣ ತಿರಸ್ಕರಿಸಿದ್ದಾರೆ.

ಈ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಾದರೂ ಏನಿದೆ..? ನಾಳೆಯಿಂದ ಹೋಳಿ ರಜೆ ಆರಂಭವಾಗಲಿದೆ ಎಂದು ಸಿಜೆಐ ಎನ್​.ವಿ. ರಮಣ ಹೇಳಿದ್ದಾರೆ ಎನ್ನಲಾಗಿದೆ. ಹೋಳಿ ಹಬ್ಬದ ಬಳಿಕ ಸುಪ್ರಿಂ ಕೋರ್ಟ್ ಹಿಜಾಬ್​ ವಿವಾದದ ಮೇಲ್ಮನವಿಯನ್ನು ಕೈಗೆತ್ತಿಕೊಳ್ಳಲಿದೆ.

error: Content is protected !!