fbpx

ಹಿಂದೂ ಜಾಗರಣಾ ವೇದಿಕೆಯ “ಯೋಧ ನಮನಂ ಶ್ರದ್ಧಾಂಜಲಿ ಯಾತ್ರೆ”ಗೆ ಚಾಲನೆ

ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿರುವ ಸೇನಾಪಡೆಯ ಮುಖ್ಯಸ್ಥರು ಸೇರಿದಂತೆ 14 ಮಂದಿಗೆ ಶ್ರದ್ದಾಂಜಲಿ ರಥ ಯಾತ್ರೆ “ಯೋಧ ನಮನಂ”ಗೆ ಮಡಿಕೇರಿಯ ಓಂಕಾರೇಶ್ವರ ದೇವಾಲಯದಿಂದ ಚಾಲನೆ ದೊರೆತಿದೆ.

ಹಿಂದೂ ಜಾಗರಣಾ ವೇದಿಕೆಯ ಯೂತ್ ವಿಂಗ್ ವತಿಯಿಂದ ಕೊಡಗು ಜಿಲ್ಲೆಯಾದ್ಯಂತ ಇಂದಿನಿಂದ ಜನವರಿ 14 ರ ವರೆಗೆ ನಡೆಯಲಿರುವ ಶ್ರದ್ದಾಂಜಲಿ ರಥಾಯಾತ್ರೆಗೆ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆತಿದೆ, ಇದಕ್ಕೂ ಮೊದಲು ಸನ್ನಿ ಸೈಡ್ ನಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಜನಪ್ರತಿನಿಧಿಗಳು, ಸಾರ್ವಜನಿಕರು ಸಲ್ಲಿಸಲಾಯಿತು.

ಮಡಿಕೇರಿ ನಗರದಲ್ಲಿ ಪ್ರದಕ್ಷಿಣೆ ಬಳಿಕ ಮೊದಲಾಗಿ ಮಡಿಕೇರಿ ತಾಲ್ಲೂಕು ಸೇರಿದಂತೆ, ಸೋಮವಾರಪೇಟೆ,ವಿರಾಜಪೇಟೆ, ಪೊನ್ನಂಪೇಟೆ ಬಳಿಕ ಜನವರಿ 4 ರಂದು ಕುಶಾಲನಗರದಲ್ಲಿ ಅಂತ್ಯಗೂಳ್ಳಲಿದೆ.

ರಥಾಯಾತ್ರೆಯಲ್ಲಿ ಭಟ್ಕಳ ಕಲಾವಿದರು ಸಿದ್ಧಗೊಳಿಸಿರುವ ಪ್ರತಿಮೆಗೆ ಸಾರ್ವಜನಿಕವಾಗಿ ಆಯಾ ಪಟ್ಟಣ, ಗ್ರಾಮ ಪಂಚಾಯಿತಿಯಲ್ಲಿ ಪುಷ್ಪನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

error: Content is protected !!