ಹಿಂದೂಗಳು, ಮುಸಲ್ಮಾನರು ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೇಳಿದ್ದರು: ಸಂಸದ ಪ್ರತಾಪ್ ಸಿಂಹ

ಹಿಂದೂಗಳು ಮತ್ತು ಮುಸಲ್ಮಾರರು ಎಂದೂ ಒಟ್ಟಿಗೆ ಇರಲು ಸಾಧ್ಯವಿಲ್ಲ, ಈ ಬಗ್ಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಹೇಳಿದ್ದರು.
ಆದರೆ ಅಂದಿನ ಯಾವೊಬ್ಬ ನಾಯಕರಿಗೂ ಅರ್ಥವಾಗಿಲ್ಲ,ಇದೇ ಕಾರಣಕ್ಕೆ ಹಿಜಾಬ್ ಇಂದು ಸದ್ದು ಮಾಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ. ಮುಸ್ಲಿಮರು ಪಾಕಿಸ್ತಾನಕ್ಕೆ ಕಳುಹಿಸಿ,ಹಿಂದುಗಳನ್ನು ಭಾರತದಲೇ ಇರಿಸಿಕೂಂಡಿದ್ದರೆ ಸರಿಯಾಗುತಿತ್ತು ಎಂದರು.
ಶಾಲಾ ಮಕ್ಕಳ ಪಠ್ಯ ಕ್ರಮದಲ್ಲಿ ಭಗವದ್ಗೀತೆ ಅಳವಡಿಕೆ ಸ್ವಾಗತಾರ್ಹ. ಭಗವದ್ಗೀತೆ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. ಅದೊಂದು ಜ್ಞಾನ ಭಂಡಾರ ಎಂದು ಮಡಿಕೇರಿಯಲ್ಲಿ ತಿಳಿಸಿದರು.