ಹಿಂದು ಜಾಗರಣ ವೇದಿಕೆ ಹಾಗೂ ಹಿಂದುಪರ ಕಾರ್ಯಕರ್ತರ ನೇತೃತ್ವದಲ್ಲಿ ಚೇರಂಬಾಣೆಯಲ್ಲಿ ಪ್ರತಿಭಟನೆ

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಚೇರಂಬಾಣೆ ಸಮೀಪದ ಕೊಳಗದಾಳು ಪಾಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಾಣಿಕೆ ಹುಂಡಿಯನ್ನು ನಕಲಿ ಕೀ ತಯಾರಿಸಿಕೊಂಡು ಭಕ್ತಾಧಿಗಳು ಹಾಕುತ್ತಿದ್ದ ಕಾಣಿಕೆ ಹಣ ಕಳ್ಳತನ ಮತ್ತು ದೇವಾಲಯದ ಮುಂಭಾಗದ ಸಣ್ಣ ನದಿಯಲ್ಲಿ ಭಕ್ತರ ದೈವಶಕ್ತಿ ನಂಬಿಕೆಗಳ ಪ್ರತೀಕವಾಗಿದ್ದ ದೊಡ್ಡ ಗಾತ್ರದ ನೂರಾರು ಮೀನುಗಳ ಸಂಖ್ಯೆ ಇತ್ತೀಚೆಗೆ ಕ್ರಮೇಣ ತೀರಾ ಕಡಿಮೆಯಾಗುತ್ತಿದ್ದು, ಕಾರಣ ಹುಡುಕಲು ದೇವರಲ್ಲಿ ಸ್ಥಳೀಯ ಭಕ್ತರು ಸತ್ಯಾನ್ವೇಷಣೆಯ ಮೊರೆ ಹೋದ ಪರಿಣಾಮವಾಗಿ ಗಣೇಶ ಚತುರ್ಥಿಯಂದು ಕಾಣಿಕೆ ಹುಂಡಿಯಿಂದ ಕಳವು ಮಾಡಿದ್ದ ಹಣ ಹಾಗೂ ಗಾಳದ ಮೂಲಕ ಹಿಡಿದು ಕೊಲ್ಲಲಾಗಿದ್ದ ದೈವಶಕ್ತಿಯ ಮೀನುಗಳ ಸಮೇತ ಆರೋಪಿ ನಸೀರ್ ಮತ್ತು ಅಪ್ರಾಪ್ತ ಬಾಲಕ ಸ್ಥಳೀಯರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದನ್ನು ಖಂಡಿಸಿ, ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ದೇವಾಲಯಗಳ ವಿಗ್ರಹ ಹಾಗೂ ಹುಂಡಿ ಹಣ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳು ಕೇಳಿ ಬಂದಿದ್ದು ಈಗ ಸಿಕ್ಕಿಬಿದ್ದಿರುವ ಆರೋಪಿಗಳನ್ನು ಪೋಲೀಸರು ಮತ್ತಷ್ಟು ತನಿಖೆಗೊಳಪಡಿಸಿ ಸತ್ಯಾಂಶವನ್ನು ಬಯಲಿಗೆಳೆಯಬೇಕೆಂದು ಹಿಂದು ಸಮಾಜಕ್ಕೆ ಕಂಠಕವಾಗಿರುವ ಮತಾಂಧ ಶಕ್ತಿಗಳ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಚೇರಂಬಾಣೆ ಗ್ರಾಮ ಪಂಚಾಯಿತಿ ಸಮೀಪ ಹಿಂದು ಜಾಗರಣ ವೇದಿಕೆ ಮತ್ತು ಹಿಂದುಪರ ಕಾರ್ಯಕರ್ತರ ನೇತತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತು. ಪ್ರತಿಭಟನೆ ಸಂದರ್ಭ ಸ್ಥಳೀಯಾಡಳಿತ ಮತ್ತು ಪೋಲೀಸ್ ಅಧಿಕಾರಿಗಳ ಮೂಲಕ ಸರಕಾರಕ್ಕೆ ಆಗ್ರಹ ಪತ್ರವನ್ನು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಸಲ್ಲಿಸಲಾಯಿತು.
300 ಕ್ಕೂ ಹೆಚ್ಚಿನ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಡಿˌಎ.ಆರ್. ತುಕಡಿ ನಿಯೋಜನೆಯೊಂದಿಗೆ ಸ್ಥಳದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಹಿಂದು ಜಾಗರಣ ವೇದಿಕೆಯ ಪ್ರಾಂತ ಪ್ರಮುಖರಾದ ಗಣರಾಜ್ ಭಟ್ ..ಜಿಲ್ಲಾ ಸಂಯೋಜಕ್ ಕುಕ್ಕೇರ ಅಜಿತ್ , ಭಾˌಜಾ.ಪಾ. ಪ್ರಮುಖ್ ಸುಮನ್ ಅಶೋಕ್ ,ಕವನ್ , ಉಪಸ್ಥಿತರಿದ್ದರು.

error: Content is protected !!