fbpx

ಹಿಂದು ಜಾಗರಣ ವೇದಿಕೆಯಿಂದ ಸೇವಾ ಕಾರ್ಯ

ಕಡಗದಾಳುವಿನ ಶ್ರೀ ಬೊಟ್ಲಪ್ಪ ದೇವಸ್ಥಾನದ ಭಾಗದಲ್ಲಿ ಮೊನ್ನೆ ದಿನ ಅತೀ ಮಳೆ ಕಾರಣ ಗುಡ್ಡ ಕುಸಿತವಾಗಿತ್ತು. ಗುಡ್ಡ ಕುಸಿತದ ಸ್ಥಳದಲ್ಲೆ ಹಲವು ದ್ವಿಚಕ್ರ ವಾಹನಗಳು ಸಿಕ್ಕಿ ಹಾಕಿಕೊಂಡಿದ್ದವು.

ಅದನ್ನು ಇಂದು ಕಡಗದಾಳು ವಲಯ ಹಿಂದು ಜಾಗರಣ ವೇದಿಕೆಯ ಸುಮಾರು 40‌‌ ಕಾರ್ಯಕರ್ತರು ಒಟ್ಟು ಸೇರಿ ಹಲವು ಮನೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ 7 ದ್ವಿಚಕ್ರ ವಾಹನಗಳನ್ನು ಸುರಕ್ಷಿತ ಸ್ಥಳಕ್ಕೆ ತರಲಾಯಿತು.

ನಂತರ ಶ್ರೀ ಬೊಟ್ಲಪ್ಪ ದೇವಸ್ಥಾನದ ಅರ್ಚಕರಾದ ಸುಬ್ಬಣ್ಣ ಇವರ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗಾಗಿದ್ದ ಕೆರೆಯು ಸಂಪೂರ್ಣವಾಗಿ ನಾಶವಾಗಿದೆ. ಸದರಿಯವರಿಗೆ ತಾತ್ಕಾಲಿಕವಾಗಿ ಕಟ್ಟೆಯನ್ನೂ ನಿರ್ಮಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು.

error: Content is protected !!