ಹಿಂದಿ ದಿವಸ್ ಆಚರಣೆ ವಿರೋಧಿಸಿ ಜಿ ಡಿ ಎಸ್ ನಿಂದ ಪ್ರತಿಭಟನೆ

ವಿರಾಜಪೇಟೆ: ಸೆಪ್ಟೆಂಬರ್ 14 ರ ದಿನವನ್ನು ಕೇಂದ್ರ ಸರ್ಕಾರ ಹಿಂದಿ ದಿವಸ ಎಂಬ ಆಚರಣೆ ಯನ್ನು ಸೃಷ್ಟಿಸಿ ದೇಶದ ಸಾವಿರಾರು ಪ್ರಾದೇಶಿಕ ಭಾಷೆ ಗಳಿಗೆ ಮೋಸ ಮಾಡುತ್ತಾ ಬಂದಿದೆ. 400 ವರ್ಷಗಳ ಇತಿಹಾಸವಿರುವ ಹಿಂದಿ ಭಾಷೆಗೆ ಹಬ್ಬ ಮಾಡುವ ಇವರಿಗೆ 2500 ಇತಿಹಾಸವಿರುವ ಕನ್ನಡ ನೆನಪಿಗೂ ಬರುವುದಿಲ್ಲ ಎಂದು ನಗರದ ಗಡಿಯಾರ ಕಂಬದ ಬಳಿ ಜಿ ಡಿ ಎಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.
ಜಿ ಡಿ ಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷರಾದ ಪಿ ಎ ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನಂತರ ತಹಸೀಲ್ದಾ ರವರಿಗೆ ಮನವಿ ನೀಡಲಾಯಿತ್ತು.