fbpx

ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶದಿಂದ ಕಣಿವೆವರೆಗೆ ನಾಲೆಗಳ ದುರಸ್ತಿ ಕಾರ್ಯಕ್ಕೆ ಸಿದ್ಧತೆ

ಕುಶಾಲನಗರದ ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶದಿಂದ ಕಣಿವೆ ವರೆಗಿನ ಮುಖ್ಯ ನಾಲೆ ಮತ್ತು ಇದಕ್ಕೆ ಹೊಂದಿಕೊಂಡಿರುವ ಎಡ ದಂಡೆಯ ಮುಖ್ಯ ನಾಲೆಯ ದುರಸ್ತಿ ಕಾರ್ಯ ಕಾವೇರಿ ನೀರಾವರಿ ನಿಗಮದ ವತಿಯಿಂದ ನಡೆಯಲಿದ್ದು, ಈ ಸಂಬಂಧ ಧ್ರೋಣ್ ಮೂಲಕ ಸಿದ್ದತೆ ನಡೆಯುತ್ತಿದೆ.

ಹಾರಂಗಿ ಅಚ್ಚುಕಟ್ಟು ಉಪವಿಭಾಗದ ಹುಲಗುಂದ ವ್ಯಾಪ್ತಿಯಲ್ಲಿನ ಹಾರಂಗಿಯ 1 ರಿಂದ 18ನೇ ತೋರಿಸುವವರೆಗೆ ವಿತರಣೆ ನಾಲೆಗಳಲ್ಲಿ 15 ಕಿಲೋಮೀಟರ್ ಹಾರಂಗಿ ನಾಲೆ ಹದಗೆಟ್ಟಿದ್ದು ,ನಾಲೆ ನಿರ್ಮಾಣ ವಾಗಿ ಹಲವು ವರ್ಷಗಳು ಕಳೆದಿದ್ದು, ಸದ್ಯದ ಪರಿಸ್ಥಿತಿ ಬಗ್ಗೆ ಶಾಸಕ ಅಪಚ್ಚು ರಂಜನ್ ನೀರಾವರಿ ಸಚಿವ ಗೋವಿಂದ ಕಾರಜೋಳ ರವರ ಗಮನ ಸೆಳೆದಿದ್ದರು. ಕೊಡಗಿನ ಹಾರಂಗಿ,ಹಾಸನ ಮತ್ತು ಮೈಸೂರು ಸೇರಿದಂತೆ 5 ಜಿಲ್ಲೆಗಳಲ್ಲಿ 54,591 ಹೆಕ್ಟೇರ್ ಪ್ರದೇಶದ ಬೇಸಾಯ ಕ್ಕೆ ನೀರು ಸರಬರಾಜು ಪ್ರದೇಶದಲ್ಲಿ ಧ್ರೋಣ್ ಸಮೀಕ್ಷೆ ನಡೆಯಲಿದೆ.

error: Content is protected !!