ಹಾರಂಗಿಯಿಂದ ರೈತರಿಗೆ ನೀರು ಪೂರೈಕೆ: ರವಿಕುಶಾಲಪ್ಪ ಭೇಟಿ ಪರಿಶೀಲನೆ

ಕಾವೇರಿ ಜಲಾನಯನದ ಪ್ರಮುಖ ಜಲಾಶಯದಲ್ಲಿ ಒಂದಾದ ಕೊಡಗಿನ ಕುಶಾಲನಗರದ ಹಾರಂಗಿ ಜಲಾಶಯಕ್ಕೆ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಭೇಟಿ ನೀಡಿದರು.

ಹಾರಂಗಿ ಜಲಾಶಯದ ಮುಖ್ಯ ಜಲಮೂಲವಾದ ಹರದೂರು ಹೊಳೆ ವ್ಯಾಪ್ತಿಯಲ್ಲಿ ಮಳೆಯಾಗದ ಹಿನ್ನಲೆಯಲ್ಲಿ ಬೇಸಿಗೆ ಬೆಳೆ ಬೆಳೆಯುವ ರೈತರಿಗೆ ಮತ್ತು ಜಾನುವಾರುಗಳಿಗೆ ನೀರನ್ನು ಒದಗಿಸುವ ಸಲುವಾಗಿ ನೀರಿನ ಲಭ್ಯತೆ ಯನ್ನು ಪರಿಶೀಲಿಸಿದರು.