ಹಾರಂಗಿಯಲ್ಲಿ ರಾರಾಜಿಸುತ್ತಿದೆ ಗುಲ್ಮೋಹರ್!

ರಸ್ತೆ ಎರಡು ಭಾಗದಲ್ಲಿ ಸಾಲು ಸಾಲು ಮರಗಳು, ಮರಗಳ ತುಂಬೆಲ್ಲಾ ಕಂಗೊಳಿಸುವ ಕೆಂಪಗಿನ ಹೂವುಗಳು.

ಹೌದು ಈ ದೃಷ್ಯ ಕಂಡು ಬರುವುದು ಅತ್ತೂರು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ. ಮೇ ಫ್ಲವರ್ ಎಂದು ಸಹಜವಾಗಿ ಕರೆಯಲ್ಪಡುವ ಈ ಹೂವುಗಳು ಅರಳುತ್ತವೆ, ಆದರೆ ಏಪ್ರಿಲ್‍ನ ಮಧ್ಯಭಾಗದಲ್ಲಿ ಮರದ ತುಂಬೆಲ್ಲಾ ಅರಳಿ ಹಸಿರಿನ ಮರ ಕೆಂಪು ಕೆಂಪಾಗಿದ್ದು ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ. ಒಂದು ತಿಂಗಳ ಕಾಲ ಈ ಹೂವುಗಳು ಕಾಣಸಿಗಲಿದ್ದು, ಹಾರಂಗಿ ಜಲಾಶಯ ಪ್ರವೇಶದ್ವಾರದಲ್ಲಿ ಸಾಲಾಗಿರುವ ಮರದಲ್ಲಿ ಅರಳಿವೆ.

error: Content is protected !!