ಹಾರಂಗಿಯಲ್ಲಿ ನೀರಿನ ಮಟ್ಟ ಇಳಿಕೆ

ಕೊಡಗು: ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು ಬೇಸಿಗೆ ಕೃಷಿ ಮಾಡುವ ರೈತರಲ್ಲಿ ಆತಂಕ ಈಡುಮಾಡಿದೆ.ಈ ಭಾರಿಯ ಮಳೆಗಾಲದಲ್ಲಿ ಮೂರು ಭಾರಿ ಜಲಾಶಯ ಭರ್ತಿಯಾಗಿದ್ದು,ನದಿಗೆ ನೀರು ಬಿಡಲಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯ ಶ್ರೀರಂಗಾಲದವರೆಗೆ ಕೃಷಿ ಮಾಡುವ ರೈತರಿಗೆ ನಾಲೆಗಳ ಮೂಲಕ ನೀರು ಒದಗಿಸಬೇಕಾಗಿರುವುದರಿಂದ ಜಲಾಶಯದಲ್ಲಿ ನೀರು ಸಂಗ್ರಹಿಸಬೇಕೆಂದು ರೈತರು ಕಾವೇರಿ ಜಲಾನಯನ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಜಲಾಶಯದಲ್ಲಿ ನೀರು ಇಳಿಮುಖವಾದರೆ, ಪ್ರಸಕ್ತ ವರ್ಷದಲ್ಲಿ ಕೊರೊನಾದಿಂದ ಕಾರ್ಮಿಕರು ಸಿಗದೆ ಹಲವು ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದು ಜೊತೆಗೆ ಭತ್ತದ ಬೆಳೆಗೆ ಬೆಂಕಿ ರೋಗ ತಗುಲಿ ಸೂಕ್ತ ಫಸಲು ಸಿಗದೆ ರೈತರು ತತ್ತರಿಸಿದ್ದಾರೆ,ಈ ಕಾರಣಕ್ಕೆ ನದಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿ ಮುಂಜಾಕೃತವಾಗಿ ನೀರು ಸಂಗ್ರಹ ಮಾಡುವ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.