fbpx

ಹಾಡಹಗಲೇ ಕಾಡಾನೆ ಹಾವಳಿ

ಸೋಮವಾರಪೇಟೆ- ಮಡಿಕೇರಿ ರಾಜ್ಯ ಹೆದ್ದಾರಿಯ ಕಾಜೂರು ಜಂಕ್ಷನ್ ನಲ್ಲಿ ಹಾಡಹಗಲೇ ಕಾಡಾನೆಗಳು ಪ್ರತ್ಯಕ್ಷವಾಗುತ್ತಿದ್ದು, ಸ್ಥಳೀಯ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಜೀವ ಭಯದಲ್ಲಿ ಓಡಾಡುವಂತಾಗಿದೆ.
ಮೂರು ಆನೆಗಳ ಹಿಂಡು ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟ ಹಾಗು ಅರಣ್ಯದ ನಡುವೆ ಪ್ರತ್ಯೇಕವಾಗಿದ್ದು, ಇದರಲ್ಲಿ ಒಂದು ಆನೆ ನೇರವಾಗಿ ರಾಜ್ಯ ಹೆದ್ದಾರಿಯಲ್ಲೇ ಅಡ್ಡಾಡಿಕೊಂಡು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು.

ಈ ಭಾಗದಲ್ಲಿ ಅರಣ್ಯ ಇಲಾಖೆ ಸೋಲಾರ್ ಬೇಲಿ,ಆನೆ ಕಂದಕ ನಿರ್ಮಾಣ ಮಾಡಿದ್ದರೂ ಕ್ಯಾಚ್ ಎನ್ನದ ಆನೆಗಳು ಕೋವರ್ ಕೊಲ್ಲಿ ಜಂಕ್ಷನ್ ನಿಂದ ಐಗೂರು, ಕಾಜೂರು, ಯಡವಾರೆ ಭಾಗದಲ್ಲಿ ಕಾಡಾನೆಗಳ ಸಂಚಾರ ನಿರಂತರವಾಗಿದ್ದು ಯಾವ ಸಂದರ್ಭದಲ್ಲಿ ವಾಹನಗಳಿಗೆ ಎದುರಾಗುತ್ತದೆ ಎಂದು ಹೇಳಲು ಅಸಾಧ್ಯ.

error: Content is protected !!