ಹಾಕಿ ಕ್ರೀಡಾಪಟುಗಳ ಆಯ್ಕೆ

ಭಾರತೀಯ ಕ್ರೀಡಾ ಪ್ರಾಧಿಕಾರದ(ಸಾಯಿ) ತರಬೇತಿ ಕೇಂದ್ರವು ಮಡಿಕೇರಿಯ ಬಾಲಕಿಯರ ಕ್ರೀಡಾ ವಿದ್ಯಾರ್ಥಿ ನಿಲಯಕ್ಕೆ ಪ್ರತಿಭಾವಂತ ಹಾಕಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ನವೆಂಬರ್, 22 ಮತ್ತು 23 ರಂದು ಬೆಳಗ್ಗೆ 9.30 ಗಂಟೆಗೆ ನಗರದ ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ ನಡೆಯಲಿದೆ.
12 ರಿಂದ 18 ವರ್ಷದೊಳಗಿನ ಬಾಲಕಿಯರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವ ಕ್ರೀಡಾಪಟುಗಳು ತಮ್ಮ ವೈಯಕ್ತಿಕ ಕ್ರೀಡಾ ಸಾಮಾಗ್ರಿ ತರತಕ್ಕದ್ದು.
ವೈದ್ಯಕೀಯ ಅರ್ಹತಾ ಪತ್ರ ವೈದ್ಯಾಧಿಕಾರಿ ಅವರಿಂದ, ಕ್ರೀಡಾ ಸಾಧನೆಯ ಸರ್ಟಿಫಿಕೇಟ್ (ಜಿಲ್ಲಾ, ವಿಭಾಗ, ರಾಜ್ಯ ಹಾಗೂ ಅದಕ್ಕಿಂತ ಮೇಲ್ಪಟ್ಟ 3 ವರ್ಷದ ಹಿಂದಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು), ಜನ್ಮ ದಿನಾಂಕ ಪ್ರಮಾಣ ಪತ್ರ (ಜನನ ಮರಣ ನೋಂದಣಿ ಅಧಿಕಾರಿ ಅವರಿಮದ), ಇತ್ತೀಚಿನ 5 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ವಿಳಾಸ ದೃಡೀಕರಣಗೊಳಿಸಲು ಆಧಾರ್ ಕಾರ್ಡ್, ಭಾಗವಹಿಸುವ ಕ್ರೀಡಾಪಟುಗಳು ಕೋವಿಡ್-19 ಟೆಸ್ಟ್ ಮಾಡಿಸಿದ ವರದಿಯನ್ನು ಕಡ್ಡಾಯವಾಗಿ ತರಬೇಕು. ಈ ದಾಖಲಾತಿಗಳಗಳ ಮೂಲ ಪ್ರತಿಯೊಂದಿಗೆ ಒಂದು ಸೆಟ್ ಪ್ರತಿಯನ್ನು ತರಬೇಕು.
ಈ ಆಯ್ಕೆ ಪ್ರಕ್ರಿಯೆಯನ್ನು ಹಿಂದಿನ 3 ವರ್ಷದ ಹಾಕಿ ಕ್ರೀಡಾ ಸಾಧನೆಯ ಪ್ರಮಾಣ ಪತ್ರ ಹಾಗೂ ಕೆಲವೊಂದು ಸಾಯಿ ನಿಗದಿತ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ತುಟ್ಟಿ ಭತ್ಯೆ ಮತ್ತು ಪ್ರಯಾಣ ದರವನ್ನು ನೀಡಲಾಗುವುದಿಲ್ಲ. ಆಯ್ಕೆಯಾದ ಕ್ರೀಡಾಪಟುಗಳಿಗೆ ವಸತಿ, ಊಟ, ಕ್ರೀಡಾ ಸಾಮಾಗ್ರಿ, ವೈದ್ಯಕೀಯ ಖರ್ಚು, ಶೈಕ್ಷಣಿಕ ಸೌಲಭ್ಯವನ್ನು ಉಚಿತವಾಗಿ ಸಾಯಿ ತರಬೇತಿ ಕೇಂದ್ರದಿಂದ ಕೊಡಲಾಗುತ್ತದೆ ಎಂದು ಸಾಯಿ ತರಬೇತಿ ಕೇಂದ್ರದ ಆಡಳಿತಾಧಿಕಾರಿ ಮಿನಿ ಉಣ್ಣಿರಾಜ್ ಅವರು ತಿಳಿಸಿದ್ದಾರೆ.