ಹಸುವಿಗೆ ಗುದ್ದಿದ ಪ್ರವಾಸಿಗರ ಕಾರು

ಕುಶಾಲನಗರದ ಗುಡ್ಡೆಹೊಸೂರು ಹೊರವಲಯದಲ್ಲಿ ಪ್ರವಾಸಿ ವಾಹನವೊಂದು ಹಸುವಿಗೆ ಡಿಕ್ಕಿ ಹೊಡೆದಿದೆ ಪರಿಣಾಮವಾಗಿ ಹಸುವಿನ ಕಾಲಿಗೆ ಗಂಭೀರವಾದ ಗಾಯವಾಗಿದೆ.
ಡಿಕ್ಕಿ ಪಡೆಸಿ ಸ್ಥಳದಿಂದ ಕಾಲ್ಕಿತ್ತು ಪ್ರವಾಸಿಗರು ಪರಾರಿಯಾಗಿದ್ದಾರೆ. ರಸ್ತೆ ಬದಿಯಲ್ಲಿದ್ದ ಜಾನುವಾರಿನ ಮೇಲೆ ಹರಿದ ಕಾರು ವೇಗದ ಚಾಲನೆ ಮಾಡಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರಿಂದ ಹಸುವಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.