ಹಸುಗೂಸನ್ನು ತೋಟಕ್ಕೆ ಎಸೆದ ಕರುಣೆಯಿಲ್ಲದ ಹೆತ್ತಾಕೆ

ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ಗ್ರಾಮದಲ್ಲಿ ಹೆತ್ತ ತಾಯಿ ಇನ್ನೂ ಕಣ್ಣು ಬಿಡದ ಅಂದಾಜು ಎರಡು ದಿನದ ಗಂಡು ಹಸುಗೂಸನ್ನು ಕಾಫಿ ತೋಟದಲ್ಲಿ ಬಿಸಾಢಿರುವ ಘಟನೆ ಬೆಳಕಿಗೆ ಬಂದಿದೆ.
ಕಾಫಿ ತೋಟದಲ್ಲಿ ವಾಸನೆ ಬರುತ್ತಿರುವ ಬಗ್ಗೆ 112 ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಸಂದರ್ಭ ಇನ್ನೂ ಹೊಕ್ಕಳ ಬಳ್ಳಿ ಕತ್ತರಿಸದ ಹಸುಗೂಸಿನ ಮುಖವೆಲ್ಲಾ ಗಾಯಗಳಾಗಿರುವುದು ಕಂಡು ಬಂದಿದ್ದು, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.