ಹಸಿಮೆಣಸ್ಸು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿ : ವ್ಯಾಪಾರಸ್ಥರಿಲ್ಲದೆ ಪುಡಿಗಾಹಿಗೆ ಮನೆಮನೆ ಮಾರಾಟ

ಕೊಡಗು:ಕೋವಿಡ್ ಲಾಕ್ಡೌನ್ ಹಸಿಮೆಣಸಿನಕಾಯಿ ಬೆಳೆಗಾರರ ಜೀವನ ಗಂಭೀರ ಪರಿಣಾಮ ಬೀರುತ್ತಿದೆ.ಸೋಮವಾರಪೇಟೆ ತಾಲ್ಲೂಕಿನಲ್ಲಿ ಹೇರಳವಾಗಿ ಬೆಳೆಯುವ ಮೆಣಸಿನಕಾಯಿ ಖರೀದಿಸಲು ವ್ಯಾಪಾರಿಗಳಿಲ್ಲದೆ ಗಿಡದಲ್ಲೇ ಕೊಳೆಯಲಾರಂಭಿಸಿದೆ.

ಲಾಕ್ಡೌನ್ ಆರಂಭವಾದಾಗಿನಿಂದ ಮನೆ ಬಾಗಿಲಿಗೆ ಬಂದು ಖರೀದಿ ಮಾಡುತ್ತಿದ್ದವರು ಇದೀಗ ಇತ್ತ ಕಡೆ ಸುಳಿಯದಿರುವ ಪರಿಣಾಮ ಸ್ವತಃ ರೈತರು ಮನೆಮನೆಗೆ ತೆರಳಿ ಕೆ.ಜಿಗೆ 5-6 ರುಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ.ಶನಿವಾರಸಂತೆಯ ಕಾಜೂರು, ಶಿಡಿಗಳಲೆ, ಅಪ್ಪಶೆಟ್ಟಳ್ಳಿ, ಕೊಜಗೇರಿ ಭಾಗದಲ್ಲಿ ಈ ಚಿತ್ರಣ ಸಾಮಾನ್ಯ ಒಂದೆಡೆಯಾದರೆ. ಕೋವಿಡ್ ಸಮಸ್ಯೆಯಿಂದ ಒಂದು ಊರಿನಿಂದ ಮತ್ತೊಂದು ಊರಿಗೂ ಹೋಗಲಾಗದ ಪರಿಸ್ಥಿತಿ ರೈತರಲ್ಲಿ ಉಂಟಾಗಿದೆ.

error: Content is protected !!