ಹಬ್ಬದ ಸಾಂಪ್ರದಾಯಿಕ ಆಚರಣೆಗೆ ಜಿಲ್ಲೆಯಲ್ಲಿ ಸಿಗುವುದೆಂದು ಅನುಮತಿ?!

ಈ ವರ್ಷದ ಆಗಸ್ಟ್ 22ರಂದು ದೇಶಾದ್ಯಂತ ಪ್ರತಿ ವರ್ಷ ಹಿಂದೂಗಳು ಅವರ ಹಬ್ಬವಾದ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವಂತೆ ನಡೆಸಲು ಅನುಮತಿಯ ಅವಶ್ಯಕತೆ ಎದುರಾಗಿದೆ. ಈ ಬಾರಿ ಕೋವಿಡ್ – 19ನಿಂದಾಗಿ ವಿಘ್ನ ನಿವಾರಕನ ಹಬ್ಬದ ಆಚರಣೆಗೇ ಏಕೋ ವಿಘ್ನ ಎದುರಾದಂತಿದೆ!
ಈ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರು ಕೋವಿಡ್-19 ತಡೆಗಟ್ಟುವ ಬಗ್ಗೆ ಕೇಂದ್ರ ಸರಕಾರ, ರಾಜ್ಯ ಸರಕಾರ, ಆರೋಗ್ಯ ಇಲಾಖೆ ಹೊರಡಿಸಿರುವ ಸುತ್ತೋಲೆ ಅನ್ವಯ ಭಕ್ತಾದಿಗಳು ಸಾರ್ವಜನಿಕವಾಗಿ ಪೆಂಡಾಲ್ ಹಾಕಿ ಗೌರಿ- ಗಣಪತಿ ಮೂರ್ತಿ ಗಳನ್ನು ಇಟ್ಟು ಆಚರಿಸುವ ವಿಚಾರದ ಕುರಿತು ಸ್ಥಳೀಯವಾಗಿ, ಪರಿಶೇಲಿಸಿ ಅನುಮತಿಯನ್ನು ನೀಡಲು ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಕೋರಿದ್ದಾರೆ.

ಈಗಾಗಲೇ ನಮ್ಮ ಜಿಲ್ಲೆಯಲ್ಲೂ ಕೂಡ ಗಣೇಶೋತ್ಸವ ಸಮಿತಿಗಳು ಹಾಗು ಹಿಂದೂಗಳು ಹಬ್ಬದ ಸರಳ ಹಾಗು ಅರ್ಥಪೂರ್ಣ ಆಚರಣೆಗೆ ಅನುಮತಿ ಕೋರುತ್ತಿದ್ದು, ಜಿಲ್ಲಾಧಿಕಾರಿಗಳಾದ ಮಾನ್ಯ ಅನಿಸ್ ಕಣ್ಮಣಿ ಜಾಯ್ ಅವರ ಅನುಮತಿಯ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಜಿಲ್ಲಾಡಳಿತ ಹಾಗು ಜಿಲ್ಲಾಧಿಕಾರಿಗಳು ಗಮನ ಹರಿಸಿ ಅನುಮತಿ ನೀಡುವ ಕುರಿತು ಕ್ರಮ ಕೈಗೊಳ್ಳಬೇಕಿದೆ.