ಹಬ್ಬದ ಪ್ರಯುಕ್ತ ನೆರವೇರಿದ ವಿವಿಧ ಪೂಜಾ ಕೈಂಕರ್ಯಗಳು

ಮಡಿಕೇರಿ ಏ.4 : ನಗರದ ಸುದರ್ಶನ ಬಡಾವಣೆಯಲ್ಲಿರುವ ಶ್ರೀ ಮುನೀಶ್ವರ ಹಾಗೂ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು.
ಏ.2 ಮತ್ತು 3 ರಂದು ಎರಡು ದಿನಗಳ ಕಾಲ ನಡೆದ ಪೂಜೆಯಲ್ಲಿ ಮಹಾ ಗಣಪತಿ ಹೋಮ ಹಾಗೂ ಪೂಜಾಕೈಂಕರ್ಯಗಳು ನಡೆಯಿತು. ಧಾರ್ಮಿಕ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಮಧ್ಯಾಹ್ನ ಮಹಾ ಮಂಗಳಾರತಿ ಮತ್ತು ಪ್ರಸಾದ ವಿತರಣೆ ನಂತರ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಏ.3 ರಂದು ಬೆಳಿಗ್ಗೆ ಹರಕೆ ಒಪ್ಪಿಸಿದ ನಂತರ ಎರಡೂ ದೇವಾಲಯಗಳಲ್ಲಿ ಮಹಾ ಮಂಗಳಾರತಿ ಮತ್ತು ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.