ಹತ್ತು ತಿಂಗಳ ಬಳಿಕ ಸಾಕಾನೆ ಕುಶಾ ಸುಳಿವು ಪತ್ತೆ!

ಕೊಡಗು:ಕೊಡಗಿನ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾದ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಿಂದ ಆಗಿಂದಾಗ್ಗೆ ಆನೆಗಳು ನಾಪತ್ತೆಯಾಗುವುದು,ಅಕ್ಕಪಕ್ಕದ ತೋಟ,ಭತ್ತದ ಗದ್ದೆಗಳಿಗೆ ನುಸುಳುವುದು ಇದ್ದೇ ಇರುತ್ತಿತ್ತೂ,ಕೆಲವೊಂದು ಭಾರಿ ಕಾಡಿಗೆ ಮೇಯಲು ತೆರಳಿದರೆ ಒಂದೆರೆಡು ದಿನದಲ್ಲಿ ಕ್ಯಾಂಪಿಗೆ ವಾಪಸ್ಸಾ ಆಗುತ್ತಿದ್ದವು,ಆದರೆ ಕ್ಯಾಂಪಿನ ರಫ್ ಅಂಡ್ ಟಫ್ ಮತ್ತು ಅಚ್ಚುಮೆಚ್ಚಿನ ಕುಶಾ ಹೆಸರಿನ ಆನೆ ದುಬಾರೆ ಆನೆ ಶಿಬಿರ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡಿನ ನಡುವೆ ಕಂಡುಬಂದಿದೆ.

ಇದೇ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ದಾಂಧಲೆ ಉಪಟಳ ನಡೆಸುತ್ತಿದ್ದ ಕಾರಣ ಅರಣ್ಯ ಇಲಾಖೆ ಸೆರೆ ಹಿಡಿದು ಶಿಬಿರದಲ್ಲಿ ಪಳಗಿಸಿದ್ದು,ಇದೀಗ ಸೆರೆಯಾದ ಕಂಡಕೆರೆ ಭಾಗದಲ್ಲಿ ಅಡ್ಡಿಡುತ್ತಿರುವುದು ಕಂಡು ಬಂದಿದ್ದು ಆರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದು ವಾಪಸ್ಸ್ ಕರೆತರಲು ಹರ ಸಾಹಸ ಪಡುತ್ತಿದ್ದಾರೆ.ಒಟ್ಟಿನಲ್ಲಿ ಸಾಕಷ್ಟು ಶ್ರಮದಿಂದ ಹಿಡಿದು ಮತ್ತೆ ಕಾಡಿನಲ್ಲಿ ಸಿಲುಕಿಕೊಂಡಿರುವ ಕುಶಾನನ್ನು ಮತ್ತೆ ಹೇಗೆ ಕರೆ ತರುತ್ತಾರೋ…? ಕಾದುನೋಡಬೇಕು.