ಮಾಸ್ಕ್ ಹಾಗು ಹಣ್ಣು ಹಂಪಲು ವಿತರಣೆ

ಸಿದ್ದಾಪುರ: ಬಿಜೆಪಿ ಶಕ್ತಿಕೇಂದ್ರ ವತಿಯಿಂದ ನರೇಂದ್ರ ಮೋದಿರವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಯ ಸರಕಾರವು ಮೇ 30ನೇ ತಾರೀಕಿಗೆ ತನ್ನ ಎರಡನೇ ಅವಧಿಯ ಎರಡನೇ ವರ್ಷವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ ಈ ದಿನವನ್ನು ಸಂಭ್ರಮಾಚರಣೆಯ ಬದಲಿಗೆ ಸೇವಾ ಸಂಘಟನ್ (ಸೇವೆಯೇ ಸಂಘಟನೆ ) ಕಾರ್ಯಕ್ರಮದ ಮೂಲಕ ಸಿದ್ದಾಪುರ ಬಸ್ ನಿಲ್ದಾಣ ಹಾಗೂ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಸ್ಕ್ ವಿತರಣೆ ಮತ್ತು ಹಣ್ಣು ಹಂಪಲು ವಿತರಣೆ ನಡೆಸುವ ಮೂಲಕ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂಧರ್ಭದಲ್ಲಿ ಮಹಾಶಕ್ತಿ ಕೇಂದ್ರದ ಮನೋಹರ್, ಸಿದ್ಧಾಪುರ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾದ ಪ್ರವೀಣ್, ಗಿರೀಶ್, ಪಕ್ಷದ ಕಾರ್ಯಕರ್ತರು, ಓಬಿಸಿ ಸಿದ್ಧಾಪುರ ಮೋರ್ಚಾದ ಅಧ್ಯಕ್ಷ ರೂಬೇಶ್, ಓಬಿಸಿ ತಾಲ್ಲೂಕು ಸದಸ್ಯ ಕಿಶೋರ್, ತಾಲ್ಲೂಕು ಉಪಾಧ್ಯಕ್ಷೆ ರಮ್ಯ ಬೂತ್ ಅಧ್ಯಕ್ಷರುಗಳಾದ ಶಾಜಿ, ರಾಜೇಶ್, ಸುರೇಶ್ ಮತ್ತು ವಿವಿಧ ಪದಾಧಿಕಾರಿಗಳು, ಹಾಗೂ ಸಿದ್ದಾಪುರ ಗ್ರಾಮ ಪಂಚಾಯತಿ ಅದ್ಯಕ್ಷರಾದ ತುಳಸಿ ಗಣಪತಿ ಮತ್ತು ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.

error: Content is protected !!