ಹಣಕ್ಕಾಗಿ ಅಜ್ಜಿಯನ್ನು ಕೊಂದ ಪಾಪಿ ಮೂಮ್ಮಗನ ಬಂಧನ

ಆರೋಪಿ ಮಂಜುನಾಥ್
ಕುಶಾಲನಗರ ಸಮೀಪದ ಮಣಜೂರಿನ ವೃದ್ದೆ ಕೊಲೆ ಪ್ರಕರಣ ಸಂಬಂಧ ಸಾಕಿ ಸಲುಹಿದ್ದ ಮಗಳ ಮಗನೇ ಕೊಲೆ ಮಾಡಿರುವುದು ಧೃಡವಾಗಿದೆ.ಮೃತ ವೃದ್ದೆ ಗೌರಮ್ಮ ನಿಗೂಢವಾಗಿ ಸಾವನಪ್ಪಿದ ಪ್ರಕರಣದ ಜಾಡು ಹಿಡಿದು ಬೆನ್ನತ್ತಿದ್ದ ಪೊಲೀಸರು ಗೌರಮ್ಮರ ಹಿರಿಯ ಮಗಳಾದ ಸುನಂದಳ ಪುತ್ರ ಕೆ.ಎಸ್ ಮಂಜುನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಸ್ಥಳೀಯ ಕಾರ್ಖಾನೆಯೊಂದಲ್ಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ್ ಅಸಲಿ ಆರೋಪಿ ಎಂದು ಬಂಧಿಸಲಾಗಿದೆ.
ಎಲ್ಲಾ ಮಕ್ಕಳನ್ನು ಮದುವೆ ಮಾಡಿಸಿ ಏಕಾಂಗಿಯಾಗಿ ಬದಕುತ್ತಿದ್ದ ಗೌರಮ್ಮಳ ಜೊತೆ ಮಂಜುನಾಥ್ ಆಗಾಗೆ ಬಂದು ಹಣಕ್ಕಾಗಿ ಜಗಳವಾಡುತ್ತಿದ್ದ ಎನ್ನಲಾಗಿದೆ,ಈ ಬಗ್ಗೆ ಪೊಲೀಸ್ ಠಾಣೆಯಲ್ಲೂ ದೂರುವದಾಖಲಾಗಿತ್ತು.ಇದರ ಜಾಡು ಹಿಡಿದು ವಿಚಾರಣೆಗೆ ಒಳಪಡಿಸಿದ್ದು ಮಂಜುನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಕೊಲೆ ಮಾಡಿರುವುದು ಬಾಯಿಬಿಟ್ಟಿದ್ದಾನೆ.