fbpx

ಸ್ವಾತಂತ್ರ್ಯ ದಿನದ ಸರಳ ಆಚರಣೆ

ವರದಿ: ಜೀವ್ ಮಞ್ಞಂಡ್ರ

ಮರಂದೋಡ ಯವಕಪಾಡಿ ಗೌಡ ಸಮಾಜದಲ್ಲಿ ಭಾರತದ 75 ನೇ ವರ್ಷದ ಸ್ವಾತಂತ್ರೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ಬೆಳಿಗ್ಗೆ 10ಗಂಟೆಗೆ ಮಾಜಿ ಸೈನಿಕರಾದ ಮುಕ್ಕಾಟಿ ವಾಸು ಗಣಪತಿ ಹಾಗೂ ಮುಕ್ಕಾಟಿ ತಮ್ಮಿ ಬೋಜಪ್ಪನವರು ಧ್ವಜಾರೋಹಣವನ್ನು ನೆರವೇರಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷರಾದ ಬಾರಿಕೆ ಮನು ಮಹೇಶ್ ರವರು ವಹಿಸಿದ್ದರು. ಸಭೆಯಲ್ಲಿ ಸಮಾಜಕ್ಕೊಳಪಟ್ಟು ಇಂದು ಉಪಸ್ಥಿತರಿದ್ದ ಮಾಜಿ ಸೈನಿಕರನ್ನು ಹೂಗುಚ್ಛ ನೀಡುವುದರ ಮೂಲಕ ಗೌರವಿಸಲಾಯ್ತು. ಮಾಜಿ ಸೈನಿಕರಾದಂತಹ ಶ್ರೀಯುತರುಗಳಾದ ಮುಕ್ಕಾಟಿ ವಾಸು ಗಣಪತಿ, ಮುಕ್ಕಾಟಿ ತಮ್ಮಿ ಬೋಜಪ್ಪ, ಚಂಡೀರ ಕಂಬು ದೇವಯ್ಯ, ಚಂಡೀರ ವಿಜಯಕುಮಾರ್, ಚಂಡೀರ ದೇವರಾಜು, ಬಾರಿಕೆ ನಂದಾ ಗಿರೀಶ್ ರವರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಮಾಜಿಸೈನಿಕರು ತಮ್ಮ ಅನುಭವವನ್ನೊಳಗೊಂಡ ಹಿತನುಡಿಯಲ್ಲಿ ಭಾರತ ದೇಶದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಅದಕ್ಕೆ ಕೊಡಗಿನ ವೀರ ಶ್ರೀಮಾನ್ ಗುಡ್ಡೇಮನೆ ಅಪ್ಪಯ್ಯಗೌಡರು ಮತ್ತು ಅವರ ಸಂಗಡಿರ ಕೊಡುಗೆ ಹಾಗೂ ಅದಕ್ಕಾಗಿ ತ್ಯಾಗ ಬಲಿದಾನ ಗೈದ ಪ್ರತಿಯೊಬ್ಬರನ್ನು ಸ್ಮರಿಸಿ ಗೌರವ ಸಲ್ಲಿಸಲಾಯಿತು. ಅಲ್ಲದೆ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಮುಂದಿನ ಯುವಪೀಳಿಗೆಗೆ ಪ್ರೇರೇಪಣಾ ಮಾತುಗಳನ್ನು ಹೇಳುತ್ತಾ ಇಂದಿನ ಮಕ್ಕಳು ಮೊಬೈಲ್ ವ್ಯಸನಿಗಳಾಗದೆ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಹಾಗೂ ದೇಶಸೇವಾ ಮನೋಭಾವನೆಯೊಂದಿಗೆ ಸೈನ್ಯ ಸೇರಬೇಕು ಎಂದು ಪ್ರೇರೇಪಿಸಿದರು. ಸಭಾಕಾರ್ಯಕ್ರಮದ ಸ್ವಾಗತಭಾಷಣ ಮತ್ತು ನಿರೂಪಣೆಯನ್ನು ಚಂಡೀರ ರವಿಕುಮಾರ್ ಗಣಪತಿ ನಿರ್ವಹಿಸಿದರು, ಕೊನೆಯಲ್ಲಿ ಮಞ್ಞಂಡ್ರ ಜೀವನ್ ರವರ ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯ್ತು.

ಸಭೆಯಲ್ಲಿ ಸಮಾಜದ ಕಾರ್ಯದರ್ಶಿ ಮುಕ್ಕಾಟಿ ತಿಲಕ್ ಕುಮಾರ್ ಮತ್ತು ಸದಸ್ಯರುಗಳು ಹಾಗೂ ಸಮಾಜ ಭಾಂದವರು ಹಾಜರಿದ್ದರು. ನೆರೆದಿದ್ದ ಎಲ್ಲರಿಗೂ ಸಿಹಿಯನ್ನು ಹಂಚಲಾಯಿತು.

error: Content is protected !!