ಸ್ವಾತಂತ್ರ್ಯ ದಿನದ ಪ್ರಯುಕ್ತ ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ

75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಸ್ ವೈ ಎಸ್ ಕುಶಾಲನಗರ ವಲಯದ ತುರ್ತುಸೇವಾ ತಂಡದ ವತಿಯಿಂದ ಕುಶಾಲನಗರ ಹಾಗೂ ಸುಂಟಿಕೊಪ್ಪ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮತ್ತು ಕೋರೋನಾ ವಾರಿಯರ್ಸ್ ಗೆ ಹಣ್ಣಹಂಪಲು ವಿತರಿಸಲಾಯಿತು.

ನಂತರ ಮಾತನಾಡಿದ ಎಸ್.ವೈ.ಎಸ್ ಕುಶಾಲನಗರ ವಲಯದ ತುರ್ತುಸೇವಾ ತಂಡದ ನಾಯಕ ಸಿ.ಎಂ.ಹಮೀದ್ ಮೌಲವಿ, ನಮ್ಮ ದೇಶಕ್ಕೆ ಸ್ವಾತಂತ್ರವನ್ನು ತಂದುಕೊಟ್ಟಂತಹ ಮಹಾನ್ ನಾಯಕರಾದ ಮಹಾತ್ಮ ಗಾಂಧೀಜಿ, ವಲ್ಲಭಾಯಿ ಪಟೇಲ್ ಜಿ, ಮೌಲಾನಾ ಮೊಹಮ್ಮದ್ ಅಲಿ, ಮೌಲಾನಾ ಶೌಕತ್ ಅಲಿ, ಅಬ್ದುಲ್ ಕಲಾಂ ಆಜಾದ್ ಮುಂತಾದ ನಾಯಕರ ಕನಸು ಹಸಿವು ಮುಕ್ತ, ರೋಗ ಮುಕ್ತ, ಹಿಂಸೆ ಮುಕ್ತ ಭಾರತವಾಗಿದೆ. ಈ ಕನಸನ್ನು ನನಸು ಮಾಡಲು ಎಸ್ ವೈ ಎಸ್ ಕೇಂದ್ರ ಸಮಿತಿಯು ಕೆಲವೊಂದು ಯೋಜನೆಗಳನ್ನು ಆಯೋಜಿಸುತ್ತಾ ಬಂದಿದೆ. ನೊಂದವರಿಗೆ, ರೋಗಿಗಳಿಗೆ, ಕಷ್ಟದಲ್ಲಿರುವವರಿಗೆ ತಮ್ಮಿಂದಾದ ಸಹಾಯವನ್ನು ಮಾಡಿಕೊಂಡು ಸಾಂತ್ವಾನ ಹೇಳುತ್ತಾ ಬಂದಿದೆ. ಈ ಭವ್ಯ ಭಾರತದಲ್ಲಿ ನಾವೆಲ್ಲರೂ ಭೇದಭಾವವಿಲ್ಲದೇ, ಸಹೋದರತೆಯಿಂದ, ಅನ್ಯೋನ್ಯತೆಯಿಂದ ಬಾಳಿ ಬಲಿಷ್ಠ ರಾಷ್ಟ್ರವನ್ನು ಕಟ್ಟಲು ಮುಂದಾಗಿ ನಮ್ಮ ಪೂರ್ವಿಕರ ಕನಸನ್ನು ನನಸು ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರುಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಹಾಗೂ ಎಸ್ ವೈ ಎಸ್ ಸಂಘಟನೆಯ ನಾಯಕರಾದ ಬಿಹೆಚ್ ಅಹ್ಮದ್ ಹಾಜಿ, ಹಂಸ ಹಾಜಿ, ಅಬೂಬಕ್ಕರ್ ದಾರಿಮಿ, ಅಬ್ದುಲ್ ಮಜೀದ್, ಹುಸೇನ್, ಎಂ.ಎಂ.ರಫೀಕ್ ಹಾಜಿ, ಯರ್ ಮುಲ್ಲಾ ಹಾಗೂ ಪ್ಲೈ ಕೂರ್ಗ್ ಅಬ್ದುಲ್ಲಾ ಮತ್ತು ಇತರ ಕಾರ್ಯಕರ್ತರು ಹಾಜರಿದ್ದರು.

error: Content is protected !!