ಸ್ವರ್ಣಗೌರಿ ಉತ್ಸವದ ವಿಜೃಂಭಣೆಯ ಆಚರಣೆ

ಸೋಮವಾರಪೇಟೆ:- ಇಲ್ಲಿಗೆ ಸಮೀಪದ ಹೊನ್ನಮ್ಮನಕೆರೆ ಕ್ಷೇತ್ರದಲ್ಲಿ ಸ್ವರ್ಣಗೌರಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಪ್ರತಿವರ್ಷ ಗೌರಿ ಹಬ್ಬದ ದಿನದಂದು ಇಲ್ಲಿ ವಿಶೇಷವಾಗಿ ಜಾತ್ರೆಉತ್ಸವ ನಡೆಯುತ್ತಿದ್ಫು ಕಳೆದ ಎರೆಡು ವರ್ಷಗಳಿಂದ ಕೊರೊನಾ ಕರಿಛಾಯೆ ಇಲ್ಲಿಯೂ ಬಿಟ್ಟಿಲ್ಲಾ ಆದ್ದರಿಂದ ಇಂದು ಕೊರೊನಾ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಯಿತು.
ಇಲ್ಲಿನ ಹೊನ್ನಮ್ಮನಕೆರೆ ಕೆರೆ ದೇವಾಲಯ ಸಮಿತಿವತಿಯಿಂದ ವಿಶೇಷ ಪೂಜೆ ನೆರವೇರಿತು ಸಂಪ್ರದಾಯದಂತೆ ದೇವಾಲಯದ ಆವರಣದಲ್ಲಿರುವ ಬಂಗಾರದ ಕಲ್ಲಿನ ಮೇಲಿಟ್ಟು ಪೂಜಿಸಿದ ಬಾಗಿನವನ್ನು ಹೊನ್ನಮ್ಮದೇವಿ ಕುಟುಂಬಸ್ಟರಿಂದ ಮೊದಲು ಕೆರೆಗೆ ಅರ್ಪಿಸಲಾಯಿತು ನಂತರ ಗ್ರಾಮಸ್ಥರು , ತಾಲೂಕು ಜನಪದ ಪರಿಷತ್ತಿನ ಸದಸ್ಯರು ಹಾಗೂ ಭಕ್ತಾದಿಗಳು ಬಾಗಿನ ಅರ್ಪಿಸಿ ಭಕ್ತಿಭಾವ ಮೆರೆದು ಕೃತಾರ್ಥ ರಾದರು. ಇಂದು ಹೊನ್ನಮನ ಕೆರೆ ದೇವಾಲಯದಲ್ಲಿ ನೂರಾರುಮಂದಿ ಪೂಜೆ ಸಲ್ಲಿಸಿದರು.